ವಿಜಯಪುರದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಒಂದಿಲ್ಲೊಂದು ಎಡವಟ್ಟು, ಗೊಂದಲ ಸೇರಿದಂತೆ ಅನೇಕ ಕಾರಣಗಳಿಂದ ಆಗಾಗ ಸುದ್ದಿಯಲ್ಲಿ ಇರುತ್ತೆ. ಒಂದೇ ದಿನದಲ್ಲಿ ಡಿಡಿಪಿಐ ಕಛೇರಿಯ 14 ಜನ ಸಿಬ್ಬಂದಿಯನ್ನ ಎತ್ತಂಗಡಿ ಮಾಡಿ ಮತ್ತೆ ಸುದ್ದಿಗೆ ಬಂದಿದೆ. ಹಾಗಾದರೆ ಈ ಸಿಬ್ಬಂದಿಗಳ ಎತ್ತಂಗಡಿಗೆ ಕಾರಣ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

ವಿಜಯಪುರದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕುರ್ಚಿಗಾಗಿ ಕಿತ್ತಾಟ, ಎಡವಟ್ಟು, ಭ್ರಷ್ಟಾಚಾರ ಸೇರಿದಂತೆ ನಾನಾ ಕಾರಣಗಳಿಂದ ರಾಜ್ಯಾದ್ಯಂತ ಈಗಾಗಲೇ ಸುದ್ದಿ ಆಗಿ ಪ್ರಚಾರ ಗಟ್ಟಿಸಿಕೊಂಡಿದೆ. ಇದೀಗ ಮತ್ತೆ ಅದೇ ರೀತಿ ಸುದ್ದಿ ಆಗಿದೆ. ಈ ಬಾರಿ ದಿಢೀರನೆ ಒಂದೆ ದಿನದಲ್ಲಿ 14 ಜನ ಕಛೇರಿಯ ಸಿಬ್ಬಂದಿಯನ್ನ ಎತ್ತಂಗಡಿ ಮಾಡುವ ಮೂಖಾಂತರ ಸದ್ದು ಮಾಡಿದೆ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕಛೇರಿಯ 14 ಜನ ಸಿಬ್ಬಂದಿಯನ್ನು ಜಿಲ್ಲೆಯ ವಿವಿದೆಡೆ ಹಾಗೂ ಬೇರೆ ಬೇರೆ ಜಿಲ್ಲೆಗಳಿಗೆ ನಿಯೋಜನೆ ಮಾಡಿ ಧಾರವಾಡದ ಅಪರ ಆಯುಕ್ತರು ಆದೇಶಿಸಿದ್ದಾರೆ. ಇದರಿಂದ ಡಿಡಿಪಿಐ ಕಛೇರಿಯಲ್ಲಿ ಸಿಬ್ಬಂದಿಗಳಿಲ್ಲದೇ ಬಿಕೋ ಅನ್ನುತ್ತಿದೆ…
ಕಛೇರಿಯ ಕರ್ತವ್ಯದಲ್ಲಿ ವಿಳಂಬ ನೀತಿ, ಕಡತಗಳ ವಿಲೆವಾರಿಗೆ ವಿಳಂಬ, ಸಾರ್ವಜನಿಕ ವಿಲೇವಾರಿಗೆ ವಿಳಂಬ, ಭ್ರಷ್ಟಾಚಾರ ಸೇರಿದಂತೆ ನಾನಾ ಕಾರಣ ಹಿನ್ನೆಲೆ ಈ ಎತ್ತಂಗಡಿ ನಡೆದಿದೆ. ಅನೇಕ ದೂರುಗಳು ಸಾರ್ವಜನಿಕವಾಗಿ ಕೂಡ ಬಂದಿದ್ದವು. ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಬೇಗ ಆಗಬೇಕು, ಕೆಲಸಗಳು ತೀವ್ರವಾಗಿ ಅಗಬೇಕು ಅಂತಾ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ
ಆಡಳಿತ ಹಿತದೃಷ್ಟಿಯಿಂದ ಈ ನಿರ್ಣಯ ಮಾಡಲಾಗಿದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಂತಸ ಪಟ್ಟಿದ್ದಾರೆ. ಆದ್ರೆ ಏಕಾಏಕಿ 14 ಜನರ ಎತ್ತಂಗಡಿ ಮಾಡಿದ ಕಾರಣ ತೊಂದರೆ ಆಗಿದೆ. ಇವರ ಜಾಗೆಕ್ಕೆ ನಿಯೋಜನೆ ಮಾಡಿದ ಸಿಬ್ಬಂದಿ ಕೂಡಲೆ ಹಾಜರಾಗಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದರೆ ಸೂಕ್ತ. ಹಲವಾರು ವರ್ಷಗಳಿಂದ ಅನೇಕ ನಮ್ಮ ಸಮಸ್ಯೆಗಳು ಪರಿಹಾರ ಕಂಡಿಲ್ಲ ಅಂತಾ ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನೂ ಕೇವಲ ಎತ್ತಂಗಡಿ ಮಾಡಿದರೆ ಹೇಗೆ ಇಲ್ಲಿ ಮಾಡಿದ ತಪ್ಪನ್ನು ಅವರು ಬೇರೆ ಸ್ಥಳಕ್ಕೆ ಅಲ್ಲಿ ಅದನ್ನು ಮುಂದುವರೆಸುತ್ತಾರೆ, ಇಂತವರಿಗೆ ಕೆಲಸದಿಂದ ಅಮಾನತ್ತು ಮಾಡಬೇಕು ಎಂಬ ಒತ್ತಾಯ ಕೂಡಾ ಜನರದ್ದಾಗಿದೆ…
ಒಟ್ಟಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಲ್ಲಿ ಈ ಮಿಂಚಿನ ಎತ್ತಂಗಡಿ ಸಾರ್ವಜನಿಕ ವಲಯದಲ್ಲಿ ಒಂದೆಡೆ ಸಂತಸ ಮೂಡಿಸಿದರೆ. ಆದ್ರೆ ಎತ್ತಂಗಡಿ ಆದ ಜಾಗಕ್ಕೆ ನಿಯೋಜನೆ ಆದ ಸಿಬ್ಬಂದಿ ಕೂಡ ಆದಷ್ಟು ಬೇಗ ಬಂದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಇನ್ನೂ ಈ 14 ಜನರಲ್ಲಿ ಕೆಲವರು ಅಮಾಯಕರು ಸಹಿತ ಇದ್ದಾರೆ ಎನ್ನಲಾಗುತ್ತಿದ್ದು, ಇಲಾಖೆ ತನಿಖೆಯಿಂದಲೇ ಈ ಸತ್ಯಾಂಶ ಹೊರ ಬರಬೇಕಿದೆ…
