Vijaypura

ಪ್ರಯಾಗ್ ರಾಜ್ ಗೆ ಹೆಲಿಕ್ಯಾಪ್ಟರ್ ವ್ಯವಸ್ಥೆ ಹೆಸರಲ್ಲಿ ವಂಚನೆ, 4 ಲಕ್ಷಕ್ಕೂ ಅಧಿಕ ವಂಚನೆಗೈದ ದರೋಡೆಕೋರರು…

Share

ಮೋಸ ಹೋಗುವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೆ ಇರುತ್ತಾರೆ ಎಂಬುದಕ್ಕೆ ಇವತ್ತು ನಾವು ಹೇಳಲು ಹೊರಟಿರುವದು ಜ್ವಲಂತ ಸಾಕ್ಷಿ. ಇನ್ನೂ ಈ ಪ್ರಕರಣದಲ್ಲಿ ಪ್ರಯಾಗ್ ರಾಜ್ ನಲ್ಲಿ ದೇವರ ದರ್ಶನ ಮಾಡಿಸುವದಾಗಿ ಹೇಳಿ ಲಕ್ಷಾಂತರ ಹಣ ವಂಚನೆ ಮಾಡಿದ್ದಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ಪ್ರಯಾಗ್ ರಾಜ್ ದರ್ಶನಕ್ಕೆ ಹೆಲಿಕ್ಯಾಪ್ಟರ್ ಮೂಲಕ ಕರೆದುಕೊಂಡು ಹೋಗಲಾಗುವದು ಎಂದು ಹೇಳಿ ಲಕ್ಷಾಂತರ ಹಣ ವಂಚಿಸಿರುವ ಪ್ರಕರಣ ಒಂದು ಬೆಳೆಕಿಗೆ ಬಂದಿದೆ. ಹೌದು ವಿಜಯಪುರ ನಗರ ನಿವಾಸಿ ಹಣಮಂತ ತಳವಾರ ಎಂಬಾತರಿಗೆ ಪ್ರಯಾಗ್ ರಾಜ್ ವಿಮಾನ ನಿಲ್ದಾಣದಿಂದ ಕುಂಭಮೇಳ ಸ್ಥಳಕ್ಕೆ ಹೋಗಲು ಹೆಲಿಕ್ಯಾಪ್ಟರ್ ಮೂಲಕ ಕರೆದುಕೊಂಡು ಹೋಗಲು ಆನ್ ಲೈನ್ ಮೂಲಕ ಹಣ ಸಂದಾಯ ಮಾಡಿದ್ದಾರೆ. ಜೆಟ್ ಸರ್ವೆ ಆ್ಯವಿಷನ್ ಪ್ರೈ ಲಿ ಎಂಬ ವೆಬ್ಸೈಟ್ ನಲ್ಲಿ ಟಿಕೇಟ್ ಬುಕ್ ಮಾಡಿದ್ದಾರೆ. ಒಂದು ಟಿಕೇಟ್ ಗೆ 1,08,000 ದಷ್ಟು ಹಣ ಪಡೆದು ಹಾಗೂ ಅಲ್ಲಿ ಉಳಿದುಕೊಳ್ಳಲು ವ್ಯವಸ್ಥೆಗೆ ಅಂತಾ 1,21,000 ರೂ ಪಡೆದಿದ್ದಾರೆ ಹಾಗೂ ಒಟ್ಟು 4 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾರೆ…

ಪ್ರಯಾಗ ರಾಜ್ ಗೆ ಹೋಗಲು ಜನ ದಟ್ಟನೆ ಹೆಚ್ಚಿರುವ ಕಾರಣ ಹೇಗೆ ಹೋಗುವದು ಎಂದು ಯೋಚಿಸುವ ವೇಳೆ ಹೆಲಿಕ್ಯಾಪ್ಟರ್ ಮೂಲಕ ಹೋಗಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ನೋಡಿ ಮೂರ್ನಾಲ್ಕು ಜನ ಆನ್ ಲೈನ್ ವೆಬ್ಸೈಟ್ ಮೂಲಕ ಟಿಕೇಟ್ ಬುಕ್ ಮಾಡಿಕೊಂಡಿದ್ದಾರೆ ಒಟ್ಟು ಆತನ ಬಳಿಯಿಂದ 4,08,000 ಹಣ ವಂಚನೆ ಮಾಡಿದ್ದಾರೆ. ಹಣ ಟ್ರಾನ್ಸಪರ್ ಆಗುವ ಮುಂಚೆ ಸರಿಯಾಗಿ ಸ್ಪಂದಿಸಿ ಹಣ ಹಾಕಿದ ಬಳಿಕ ಆತನಿಗೆ ಯಾವುದೇ ಟಿಕೇಟ್ ಸಹಿತ ನೀಡಿಲ್ಲ ಆತನಿಗೆ ಸ್ಪಂದನೆ ಕೂಡಾ ಮಾಡಿ ಹೀಗಾಗಿ ವಿಜಯಪುರದ ಸೈಬರ್ ಠಾಣೆಗೆ ಹೋಗಿ ಆತ ದೂರನ್ನು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿ ಆರೋಪಿತರ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಿಸಿ ದೂರುದಾರರಿಗೆ ಹಣ ಮರಳಿಸಿದ್ದಾರೆ…

ಒಟ್ಟಿನಲ್ಲಿ ಮೋಸ ಹೋಗುವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬುದಕ್ಕೆ ಇದೇ ಪ್ರಕರಣ ಜ್ವಲಂತ ಸಾಕ್ಷಿ. ಇನ್ನಾದರೂ ಈ ತರಹದ ಪ್ರಕರಣಗಳಿಗೆ ಜನರು ಮೋಸ ಹೋಗದೇಎಚ್ಚರಿಕೆ ವಹಿಸಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Tags:

error: Content is protected !!