Dharwad

ಕಳೆದ ಜ.21ರಂದು ಧಾರವಾಡದ ವಿನಯ ಡೈರಿ ಬಳಿ ಯುವತಿಯ ಶವ ಪತ್ತೆ ಪ್ರಕರಣ…

Share

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಅವರಿಬ್ಬರ ನಡುವೆ ಮುಂದಿನ ತಿಂಗಳು ನಿಶ್ಚಿತಾರ್ಥದ ಕಾರ್ಯಕ್ರಮ ನಡೆಯಬೇಕಿತ್ತು. ಒಂದೇ ಕಾಲೇಜಿನಲ್ಲಿ ಓದಿದ್ದ ಹುಡುಗ ಹುಡುಗಿ ಮದುವೆಗೆ ಹಿರಿಯರು ಒಪ್ಪಿದ್ದರು. ಅದರೆ ಮದುವೆ ನಿಶ್ಚಿತಾರ್ಥಕ್ಕೆ ಯುವತಿಯೊಂದಿಗೆ ಕುಂದರಬೇಕಿದ್ದ ಖದೀಮ ಆ ಯುವತಿಯ ಉಸಿರನ್ನೇ ನಿಲ್ಲಿಸಿ, ಪೊಲೀಸರೊಂದಿಗೆ ಹುಡುಕುವ ನಾಟಕವಾಡಿ ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಎಲ್ಲಿ ನಡೆದಿರೋದು ಇದೂ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ವಿವರ.

ಒಂದು ಕಡೆ ಬಾಳಿ ಬದುಕಬೇಕಾಗಿದ್ದ ಯುವತಿ ಶವವಾಗಿ ಪತ್ತೆ…ಮತ್ತೊಂದು ಕಡೆ ಯುವತಿಯ ಶವ ನೋಡಿ ಬೆಚ್ಚಿಬಿದ್ದ ಸ್ಥಳೀಯರು…. ಮಗದೊಂದು ಕಡೆ ಯುವತಿಯ ಶವ ಬಳಿ ಪರಿಶೀಲನೆ ಮಾಡುತ್ತಿರುವ ಗ್ರಾಮೀಣ ಠಾಣೆಯ ಪೊಲೀಸರು…ಎಸ್ ಈ ಘಟನೆ ನಡೆದಿದ್ದು, ಧಾರವಾಡದಲ್ಲಿ. ಅಂದಹಾಗೆ ಕಳೆದ ದಿನ ಜನೆವರಿ 21 ಬುಧವಾರ ಧಾರವಾಡದ ಗಾಂಧಿ ಚೌಕ ನಿವಾಸಿಯಾಗಿದ್ದ 20 ವರ್ಷದ ಝಾಕೀಯಾ ಮುಲ್ಲಾ ಎಂಬ ಯುವತಿ ಧಾರವಾಡ ಮನಸೂರು ಒಳ ರಸ್ತೆಯಯಲ್ಲಿರು ಧಾರವಾಡ ಗ್ರಾಮೀಣ ಶಾಸಕರಾದ ವಿನಯ ಕುಲಕರ್ಣಿ ಒಡೆತನದ ವಿನಯ ಡೈರಿ ಬಳಿ ಯುವತಿ ಶವವಾಗಿ ಪತ್ತೆಯಾಗಿದ್ದಳು. ಪ್ಯಾರಾ ಮೆಡಿಕಲ್ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಝಾಕೀಯಾ ಕೊಲೆಯಾಗುವ ಮುನ್ನ ಅಂದರೆ ಮಂಗಳವಾರದಂದು ತನ್ನ ಮನೆಯವರಿಗೆ ಲ್ಯಾಬ್‌ಗೆ ಜೋಗಿ ಬರುವುದಾಗಿ ಹೇಳಿ, ಆಚ್ಚೆ ಬಂದಿದ್ದಳಂತೆ. ಆಗ ಝಾಕೀಯಾ ಹಾಗೂ ಮದುವೆಯಾಗಬೇಕಿದ್ದ ಸಾಬೀರ ಜತೆಗೆ ಹೋಗಿದ್ದಳಂತೆ. ಆದರೆ ಸಂಜೆಯಾದ್ರೂ ಮನೆ ಮಗಳು ಝಾಕೀತಾ ಮನೆಗೆ ಬಾರದೇ ಇದ್ದಾಗ, ಪರಿಯಸ್ಥರು ಸೇರಿ ಎಲ್ಲರಿಗೂ ಕರೆ ಮಾಡಿ ವಿಚಾರಿಸಿದ್ದಾರೆ. ಆದರೆ ಝಾಕೀಯಾ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಕೊನೆಗೆ ಮನೆಯವರು ಹಾಗೂ ಮದುವೆ ಮಾಡಿಕೊಳ್ಳಬೇಕಿದ್ದ ಯುವಕ ಸಾಬೀರ ಮುಲ್ಲಾ ಸೇರಿ ಧಾರವಾಡ ಶಹರ ಠಾಣೆಗೆ ದೂರು ನೀಡಿದ್ದರು. ಇನ್ನೂ ದೂರು ದಾಖಲಿಸಿಕೊಂಡ ಶಹರ ಠಾಣೆಯ ಪೊಲೀಸರು ಯುವತಿಯ ಮೊಬೈಲ ನಂಬರ್ ಟ್ರ್ಯಾಕ್ ಹಾಕಿ ಪತ್ತೆಗೆ ಮುಂದಾಗಿದ್ದಾರೆ. ಆಗ ಯುವತಿಯ ಮೊಬೈಲ್ ಝಾಕೀಯಾ ಶವವಾಗಿ ಬಿದ್ದ ಸ್ಥಳ ತೋರಿದೆ. ಅದೂ ಧಾರವಾಡ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಯುವತಿ ಶವ ನೋಡಿದ ಶಹರ ಠಾಣೆಯ ಪೊಲೀಸರು, ಗ್ರಾಮೀಣ ಠಾಣೆಯ ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ.‌ ಬಳಿಕ‌ ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಠಾಣೆಯ ಪೊಲೀಸರು ಯುವತಿಯ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಯಿಸಿ ಯುವತಿಯನ್ನು ಗುರುತ್ತಿಸಿದ್ದಾರೆ. ಈ ವೇಳೆ ಮದುವೆಯಾಗಬೇಕಿದ್ದ ಯುವಕನ್ನು ಬಂದಿದ್ದ, ಬಳಿಕ ಕೊಲೆಯ ತನಿಖೆ ಕೈಗೊಂಡ ಗ್ರಾಮೀಣ ಠಾಣೆಯ ಪೊಲೀಸರು. ಯುವತಿಯ ಶವ ಪತ್ತೆಯಾದ ಇಪ್ಪತ್ತನಾಲ್ಕು ಗಂಟೆಯಲ್ಲಿಯೇ ಅಸಲಿ ಕೊಲೆಗಾರ ಸಾಬೀರನನ್ನು ಪತ್ತೆ ಮಾಡಿದ್ದಾರೆ.

ಇನ್ನೂ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಗಾರ ಪತ್ತೆಗೆ ಮುಂದಾಗಿದ್ದರು. ಎಲ್ಲ ಆಯಾಮದ ಕುರಿತು ತನಿಖೆ ಕೈಗೊಂಡ ವೇಳೆ ಝಾಕೀಯಾ ಮದುವೆಯಾಗಬೇಕಿದ್ದ ಅವಳ ಕಾಲೇಜ ಮೇಟ್ ಸಾಬೀರ ಮುಲ್ಲಾ ಮೇಲೆ ಅನುಮಾನ ಮೂಡಿದೆ. ಕೂಡಲೇ ವಶಕ್ಕೆ ಪಡೆದು ಪೊಲೀಸ್ ಭಾಷೆ ಬಳಸಿದ ವೇಳೆ, ಕೊಲೆಯ ಅಸಲಿ ಕೊಲೆಗಾರ ಇವನೇ ಅನ್ನೋದು ಬಯಲಿಗೆ ಬಂದಿದೆ. ಸಾಬೀರ ಹಾಗೂ ಝಾಕೀಯಾ ಇಬ್ಬರು ಪ್ಯಾರಾ ಮೆಡಿಕಲ್ ಓದುವ ವೇಳೆ ಇಬ್ಬರು ಪರಿಚಯ ಆತ್ನೀಯರಾಗಿದ್ದರಂತೆ. ಈ ವಿಷಯ ಕುಟುಂಬಸ್ಥರಿಗೆ ತಿಳಿದು ಇಬ್ಬರಿಗೂ ಹಿರಿಯರು ಮಾತುಕತೆ ಮಾಡಿ, ಫೆಬ್ರವರಿ ತಿಂಗಳಲ್ಲಿ ನಿಶ್ಚಿತಾರ್ಥ ನಿಗದಿ ಮಾಡಿದ್ದಾರೆ. ಆದರೆ ಕೆಲಸದ ನಿರೀಕ್ಷೆಯಲ್ಲಿದ್ದ ಝಾಕೀಯಾನನ್ನು ಇತನ್ನೇ ಕರೆದುಕೊಂಡು ಹೋಗಿ ಬೇರೆಕಡೆ ಹತ್ಯೆ ಮಾಡಿ, ರಾತ್ರಿ ವೇಳೆ ಝಾಕೀಯಾ ಶವವನ್ನು ವಿನಯ ಡೈರಿ ಬಳಿಯ ರಸ್ತೆಯ ಪಕ್ಕದಲ್ಲಿ ಬಿಸಾಕಿ ಹೋಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದ್ದು, ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬ ಗಾದೇ ಮಾತು ಈ ಘಟನೆಯಲ್ಲಿ ಅಕ್ಷರಶಃ ನೀಜ ಎಂಬತಾಗಿದ್ದು, ಯುವತಿಯ ಹತ್ಯೆ ಮಾಡಿ ಪೊಲೀಸರ ತನಿಖೆ ದಾರಿ ತಪ್ಪಿಸಲು ಪ್ರಯತ್ನದಲ್ಲಿದ್ದ ಯುವತಿಯ ಭಾವಿ ಪತಿಯೇ ಅಸಲಿ ಕೊಲೆಗಾರ ಎಂಬುವುದು, ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರ ಚಾಣಾಕ್ಷತನದ ತನಿಖೆಯಿಂದ ಬಯಲಾಗಿದೆ. ಒಟ್ಟಿನಲ್ಲಿ ನೂರಾರು ಕನಸು ಕಟ್ಟಿಕೊಂಡು ಕಿರಾತಕನನ್ನು ನಂಬಿ ಹೋಗಿ ಈಗ ಬಾಳಿ ಬದುಕಬೇಕಿದ್ದ ಯುವತಿ ಮಸಣ ಸೇರಿರುವುದು ವಿಪರ್ಯಾಸವೇ ಸರಿ.

Tags:

error: Content is protected !!