Chikkodi

ಇಂಗಳಿ ಗ್ರಾಮ ಅಭಿವೃದ್ಧಿಗೆ 22.11 ಕೋಟಿ ರೂಪಾಯಿ ಅನುದಾನ :ಎಂಎಲ್ಸಿ ಪ್ರಕಾಶ ಹುಕ್ಕೇರಿ

Share

ಶಾಸಕ ಗಣೇಶ ಹುಕ್ಕೇರಿ ಹಾಗೂ ನನ್ನ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ವಿವಿಧ ಅಭಿವೃಧಿ ಕಾಮಗಾರಿಗಳಿಗೆ 22.11 ಕೋಟಿ ಅನುದಾನದ ಮಂಜೂರಾಗಿವೆ ಎಂದು ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಕೃಷ್ಣಾ ನದಿ ದಡದ ಜಾಕ್‌ವೆಲ್ ಹತ್ತಿರ ರೂ. 2.50 ಕೋಟಿ ಅಂದಾಜು ವೆಚ್ಚದ ಘಾಟ್ ನಿರ್ಮಾಣ ಕಾಮಗಾರಿಗೆ ಚಾಲನೆಯನ್ನು ನೀಡಿ ಬಳಿಕ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಇಂಗಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಈ ಹಿಂದೆ ನೀಡಿದ್ದ ರೂ. 60 ಲಕ್ಷಗಳಿಗೆ ಹೆಚ್ಚುವರಿಯಾಗಿ ರೂ. 50 ಲಕ್ಷಮಂಜೂರಾಗಿ ಒಟ್ಟು ರೂ. 1.10 ಕೋಟಿ ಅನುದಾನ ಒದಗಿಸಲಾಗಿದೆ. ಇದಲ್ಲದೆ, ಮರಾಠಾ ಸಮಾಜದ ಸಮುದಾಯ ಭವನಕ್ಕೆ ಹಾಗೂ ಪೇವರ್‌ಬ್ಲಾಕ್ ಅಳವಡಿಕೆಗೆ ರೂ. 20 ಲಕ್ಷ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ರೂ. 1 ಕೋಟಿ ಸೇರಿ ಒಟ್ಟು ರೂ. 1.20 ಕೋಟಿ ಅನುದಾನ ಮಂಜೂರಾಗಿದೆ.

ಶ್ರೀ ಬೀರೇಶ್ವರ ದೇವಸ್ಥಾನ ಹತ್ತಿರ ತೆರೆದ ಮಂಟಪ ನಿರ್ಮಾಣಕ್ಕೆ ರೂ. 5 ಲಕ್ಷ ಹಾಗೂ ಶ್ರೀ ರಾಮಲಿಂಗ ದೇವಸ್ಥಾನ ಕಟ್ಟಡ ಕಾಮಗಾರಿಗೆ ಒಟ್ಟು 29 ಲಕ್ಷ ಅನುದಾನ ಒದಗಿಸಲಾಗಿದೆ. ಇದಲ್ಲದೆ, ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ನಮ್ಮ ಅಣ್ಣಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ರೂ. 5 ಲಕ್ಷ ಅನುದಾನ ನೀಡಲಾಗಿದೆ ಎಂದರು.

ಹೊಸ ಇಂಗಳಿ ಗ್ರಾಮದಿಂದ ಶೇಡಬಾಳಕ್ಕೆ ಸಂಪರ್ಕಿಸುವ 3.4. ಕಿ.ಮೀ ರಸ್ತೆ ಸುಧಾರಣೆಗೆ ರೂ. 2.76 ಕೋಟಿ ಇಂಗಳಿ ಗಾವಠಾಣ
ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ರೂ. 50 ಗಾವಠಾಣದಿಂದ ಮಾಂಜರಿ-ಇಂಗಳಿ ರಸ್ತೆಗೆ ಕೂಡುವ (ಬಾಳು ಕಾಡಾಪೂರೆ ತೋಟದ ವರೆಗೆ) 3.35 ಕಿ.ಮೀ ರಸ್ತೆ ಖಡೀಕರಣ ಡಾಂಬರೀಕರಣಕ್ಕೆ ಹಾಗೂ ರೂ. 2.72 ಕೋಟಿ, ಬಾಳು ಕಾಡಾಪೂರೆ ತೋಟದಿಂದ ಮಾಂಜರಿ ಹಳೆ ಬಸ್ ನಿಲ್ದಾಣದ ವರೆಗೆ ರಸ್ತೆ ಸುಧಾರಣೆಗೆ ರೂ. 1.84 ಕೋಟಿ ಮತ್ತು ಶ್ರೀ ಛತ್ರಪತಿ ಶಿವಾಜಿ ಸರ್ಕಲ್‌ನಿಂದ ಇಂಗಳಿ ಗಾವಠಾಣ ವರೆಗೆ ರಸ್ತೆ 4.30 6. మిల ಸುಧಾರಣೆಗೆ ರೂ. 4.50 ಕೋಟಿ ಅನುದಾನ ಮಂಜೂರಾಗಿದೆ ಎಂದರು. ಇಂಗಳಿ ಗ್ರಾಮದ ರೈತರ ಜಮೀನುಗಳಿಗೆ ಏತ ನೀರಾವರಿ ಯೋಜನೆ ಕೈಗೊಳ್ಳಲು ಒಟ್ಟು ರೂ. ಅನುದಾನ 4.11 ಕೋಟಿ ಮಂಜೂರಾಗಿದೆ. ಇಂಗಳಿ ಗ್ರಾಮದ ಕೃಷ್ಣಾ ನದಿ ದಡದ ಜಾಕ್‌ವೆಲ್ ಹತ್ತಿರ ರೂ. 2.50 ಕೋಟಿ ಅಂದಾಜು ವೆಚ್ಚದ ಘಾಟ್ ನಿರ್ಮಾಣ. ಇಂಗಳಿ ಗ್ರಾಮದ ವಿವಿದೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಸಹಕಾರ ಸಂಘದ 2ನೇ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ರೂ. 20 ಲಕ್ಷ ಅನುದಾನ ಮಂಜೂರಾಗಿ ಕಾಮಗಾರಿ ಅಂತಿಮ ಹಂತದಲ್ಲಿದೆ.
ಹೊಸ ಇಂಗಳಿ ಗ್ರಾಮದ ಶ್ರೀ ಲಕ್ಷ್ಮೀಶನ ಸಹಕಾರಿ ಸಂಘದ ರೂ. 36.10 ಲಕ್ಷ ವೆಚ್ಚದ ಗೋದಾಮು ಕಟ್ಟಡವನ್ನು ಉದ್ಘಾಟಿಸಲಾಗಿದೆ ಎಂದರು.

ಬಳಿಕ ಪಿಕೆಪಿಎಸ್ ಅಧ್ಯಕ್ಷ ರಾಜಾಮಾನೆ ಮಾತನಾಡಿ ಇಂಗಳಿ ಗ್ರಾಮದ ವಿವಿಧ ಅಭಿವೃದ್ಧಿ ‌ಕಾಮಗಾರಿಗಳಿಗೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹಾಗೂ ಎಂಎಲ್ಎ ಗಣೇಶ ಹುಕ್ಕೇರಿಯವರು 22 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಅವರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ ಪಾಟೀಲ,ಪಾಂಡುರಂಗ ಮಾನೆ,ಅಶೋಕ ಹವಳೆ,ಅಪ್ಪಾಸಾಹೇಬ ಜತ್ರಾಟೆ,ಗಣಪಾ ಧನವಾಡೆ,ಸಿದ್ರಾಮ ಶೆಳಕೆ,ಚಂದ್ರಕಾಂತ ಪಾಟೀಲ, ಬಾಳು ಧನಗರ,ಸಂಜಯ ನರವಾಡೆ,ಶರತ ಪಾಟೀಲ, ಮಚೇಂದ್ರ ಧನಗರ,ಸಂಜಯ ಕುಡಚೆ,ರಾಜು ಮಾನೆ,ಅಣ್ಣಾಪ್ಪಾ ಜಾಧವ,ಅಜೀತ ಚಿಗರೆ,ರಮೇಶ ಮುರಚಟೆ,ಚಂದ್ರಕಾಂತ ಲಂಗೋಟೆ,ಬಾಬು ಮಿರ್ಜೆ,ಮಹೇಶ ಕಾಗವಾಡೆ,ಶಿವಾನಂದ ಕರೋಶಿ,ವಿಜಯ ಜಾಧವ,ಸಂಜು ಪಿರಾಜೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:

error: Content is protected !!