ಮಹಿಳೆಯೊಬ್ಬರು ಬೆಳಗ್ಗೆ ಪೂಜೆಗೆಂದು ಜೈನ್ ಮಂದಿರಕ್ಕೆ ಹೋಗುತ್ತಿದ್ದಾಗ, ಫಾಲೋ ಮಾಡಿಕೊಂಡು ಬಂದಿದ್ದ ಕಳ್ಳರು, ಮಹಿಳೆ ಮಂದಿರದ ಒಳಗೆ ಹೋಗುತ್ತಿದ್ದಂತೆ, ಕೊರಳಲ್ಲಿದ್ದ ಸರವನ್ನು ಕಳ್ಳ ಕಿತ್ತೊಯ್ದಿರುವ ಘಟನೆ ಹುಬ್ಬಳ್ಳಿಯ ಕುಸಗಲ್ ರೋಡ್ ಕೇಶ್ವಾಪುರ ಅರಿಹಂತ ನಗರದ ಜೈನ್ ಮಂದಿರದ ಮುಂದೆ ನಡೆದಿದೆ.

ಮಹಿಳೆ ಓರ್ವರು ಜೈನ್ ಮಂದಿರಕ್ಕೆ ಹೋಗುತ್ತಿದ್ದರು. ಬೈಕ್ ಮೂಲಕ ಬಂದ ಕಳ್ಳರು ಮಹಿಳೆ ಕೊರಳಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಮಹಿಳೆ ಕೆಳಗೆ ಬಿದ್ದರು ಬಿಡದ ಕಳ್ಳ ಬಂಗಾರದ ಸರವನ್ನು ಕಿತ್ತೊಯ್ದಿದ್ದಾನೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಈ ಚೈನ್ ಸ್ನಾಚರ್ಸ್‌ಗೆ ಬಿಸಿ ಮುಟ್ಟಿಸಬೇಕಿದೆ.
