ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿರುವ ಪಿಕೆಪಿಎಸ್ ಸಂಘದ ವತಿಯಿಂದ ಡಿಸಿಸಿ ಬ್ಯಾಂಕ ಸಹಬಾಗಿತ್ವದಲ್ಲಿ ಇಬ್ಬರು ರೈತರಾದ ನಾಗರಾಜ ಹನುಮಂತ ಪಾಲಕರ ಮತ್ತು ಪ್ರವೀಣ ಹೊನ್ನಪ್ಪ ನೀಲಜಕರ ಇಬ್ಬರಿಗೂ ಬೆಳಗಾವಿ ಡಿಸಿಸಿ ಬ್ಯಾಂಕ ನಿರ್ದೇಶಕ ಅರವಿಂದ ಪಾಟೀಲ ಅವರು ಟ್ರ್ಯಾಕ್ಟರ್ ಖರೀದಿಸಿದ ರೈತರಿಗೆ ಕೀ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಲಿಂಗನಮಠ ಪಿಕೆಪಿಎಸ್ ಸಂಘದ ಅಧ್ಯಕ್ಷರಾದ ಶ್ರೀಶೈಲ ಮಾಟೊಳ್ಳಿ, ಲಿಂಗನಮಠ ಗ್ರಾಪಂ ಅಧ್ಯಕ್ಷರಾದ ಹಾಗೂ ಪಿಕೆಪಿಎಸ್ ನಿರ್ದೇಶಕರಾದ ಕಾಶೀಮ ಹಟ್ಟಿಹೋಳಿ, ಸಂಘದ ಉಪಾಧ್ಯಕ್ಷರಾದ ದಶರಥ ಪಾಟೀಲ, ನಿರ್ದೇಶಕರಾದ ಪಾಂಡುರಂಗ ಪಾಟೀಲ, ಪ್ರಕಾಶ ಬಿಜಾಪುರ, ಮೈಕಲ ಫರ್ನಾಂಡಿಸ, ಸಂಗಮೇಶ ಪಾಟೀಲ, ಕಲ್ಲಪ್ಪ ಸಂಗೊಳ್ಳಿ, ಬಸಪ್ಪ ಸತ್ತೇನ್ನವರ, ಸರೋಜಾ ಬಾಗೇವಾಡಿ, ಸುರೇಖಾ ಅಂಬಡಗಟ್ಟ, ಬ್ಯಾಂಕ ನಿರೀಕ್ಷಕ ಎಸ್.ಕೆ ಹಿರೇಮಠ, ಗುಂಜಿ ಸಂಘದ ಅಧ್ಯಕ್ಷ ಪ್ರಕಾಶ ಗವಡೆ, ಗೋದೋಳ್ಳಿ ಸಂಘದ ಮಹೇಂದ್ರ ದೇಸಾಯಿ ಹಾಗೂ ಇತರರು ಇದ್ದರು.
