Hukkeri

ಪ್ರಜಾಪ್ರಭುತ್ವ ದಿನದಂದು ಎಲ್ಲ ಇಲಾಖೆ ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸಬೇಕು – ಬಲರಾಮ ಕಟ್ಟಿಮನಿ.

Share

ಜನವರಿ 26 ರಂದು ಜರಗುವ ಪ್ರಜಾ ಪ್ರಭುತ್ವ ದಿನದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಸಿಬ್ಬಂದಿಗಳು ಕಡ್ಡಾಯವಾಗಿ ಭಾಗವಹಿಸ ಬೇಕು ಎಂದು ಹುಕ್ಕೇರಿ ತಹಸಿಲ್ದಾರ ಬಲರಾಮ ಕಟ್ಟಿಮನಿ ಖಡಕ ಸಂದೇಶ ರವಾನಿಸಿದರು.
ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ರಾಷ್ಟ್ರೀಯ ಹಬ್ಬಗಳನ್ನು ಎಲ್ಲರೂ ಸೇರಿ ವಿಬೃಂಜನೆಯಿಂದ ಆಚರಿಸ ಬೇಕು ಕಾರಣ ಜನೆವರಿ 26 ರಂದು ಎಲ್ಲ ಇಲಾಖೆ ನೌಕರರು ಕಡ್ಡಾಯವಾಗಿ ಸಾರ್ವಜನಿಕ ದ್ವಜಾರೋಹನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭೆ ತರಬೇಕು ಎಂದರು ..

ರಾಷ್ಟ್ರೀಯ ಹಬ್ಬಗಳ ಕಾರ್ಯದರ್ಶಿ ಬಿ ಇ ಓ ಪ್ರಭಾವತಿ ಪಾಟೀಲ ನೇತೃತ್ವದಲ್ಲಿ ಕಾರ್ಯಕ್ರಮಗಳ ರೂಪ ರೇಖೆಗಳನ್ನು ರೂಪಿಸಲಾಯಿತು.
ಈ ಸಂದರ್ಭದಲ್ಲಿ ಗಣ್ಯರಾದ ಉದಯ ಹುಕ್ಕೇರಿ, ಸುಭಾಷ ನಾಯಿಕ, ಕಬೀರ ಮಲ್ಲಿಕ್, ತಮ್ಮನಗೌಡ ಪಾಟೀಲ, ಹಾಗೂ ವಿವಿಧ ಇಲಾಖೆ ಅನುಷ್ಟಾನ ಅಧಿಕಾರಿಗಳಾದ ಶಶಿಕಾಂತ ವಂದಾಳೆ, ಸವಿತಾ ಹಲಕಿ, ಸವಿತಾ ಏಶಿ, ಬಸವರಾಜ ನಾಂದೂಡಕರ, ಈಶ್ವರ ಸಿದ್ನಾಳ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!