ಹುಕ್ಕೇರಿ ನಗರದಲ್ಲಿ ಜನ ಜನೆವರಿ 31 ರಂದು ಬೃಹತ್ ಹಿಂದೂ ಸಮಾವೇಶ ಮತ್ತು ಶೋಭಾಯಾತ್ರೆ ಜರುಗಲಿದೆ ಎಂದು ಉದ್ಯಮಿ ಪೃಥ್ವಿ ಕತ್ತಿ ಹೇಳಿದರು.
ಅವರು ಇಂದು ಹುಕ್ಕೇರಿ ನಗರದ ಪಿಕಾರ್ಡ ಬ್ಯಾಂಕ ಸಭಾ ಭವನದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಜನೇವರಿ 31 ಹುಕ್ಕೇರಿ ನಗರದ ಅಡವಿ ಸಿದ್ದೇಶ್ವರ ಮಠದ ಆವರಣದಿಂದ ಮದ್ಯಾಹ್ನ 2 ಘಂಟಗೆ ವಿರಾಟ ಹಿಂದೂ ಶೋಭಾಯಾತ್ರೆ ಪ್ರಾರಂಭವಾಗಿ ಹೋಸ ಬಸ್ ನಿಲ್ದಾಣ ಮೂಲಕ ವಿಶ್ವರಾಜ ಭವನಕ್ಕೆ ತೇರಳಿ ಸಾಯಂಕಾಲ 4 ಘಂಟೆಗೆ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯುವ ಭಾರತ ರಾಜ್ಯ ಪ್ರಮುಖರಾದ ಶರಣೆಗೌಡ ಇವರ ನೇತೃತ್ವದಲ್ಲಿ ಹಿಂದೂ ಸಮಾವೇಶ ಜರುಗಲಿದೆ ಕಾರಣ ಹುಕ್ಕೇರಿ, ಯಮಕನಮರ್ಡಿ ಭಾಗದ ಜನರು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೋಳಿಸ ಬೇಕು ಎಂದರು .

ಈ ಸಂದರ್ಭದಲ್ಲಿ ವಿದ್ಯುತ್ ಸಹಕಾರಿ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ, ಗುರುರಾಜ ಕುಲಕರ್ಣಿ, ಸತ್ತೆಪ್ಪ ನಾಯಿಕ, ರಾಜು ಮುನ್ನೋಳ್ಳಿ, ಚನ್ನಪ್ಪ ಗಜಬರ, ಕುಮಾರ ಜುಠಾಳೆ, ಹರೀಶ ದೊಡ್ಡಲಿಂಗನವರ, ಮಹಾಂತೇಶ ತಳವಾರ, ಬಸವರಾಜ ಗಂಗನ್ನವರ ಮೊದಲಾದವರು ಉಪಸ್ಥಿತರಿದ್ದರು.
