Dharwad

ಧಾರವಾಡದ ಹೊರವಲಯದ ವಿನಯ ಡೈರಿ ಸಂರ್ಕಿಸುವ ರಸ್ತೆಯಲ್ಲಿ ಯುವತಿಯ ಹತ್ಯೆ….

Share

ಯುವತಿಯ ಮುಖ ಭಾಗಕ್ಕೆ ಗಾಯಪಡಿಸಿದಲ್ಲದೆ ಕುತ್ತಿಗೆಗೆ ಯುವತಿಯ ವೇಲ್‌ನಿಂದ ಬಿಗಿದು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಹೊರವಲಯ ವಿನಯ ಡೈರಿ ಸಂರ್ಕಿಸುವ ರಸ್ತೆಯಲ್ಲಿ‌ ನಡೆದಿದೆ.

ವೈ- ಧಾರವಾಡದ ಗಾಂಧಿ ಚೌಕ ನಿವಾಸಿ ಝಕೀಯಾ (20) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಹತ್ಯೆಯಾದ ಯುವತಿ ಪ್ಯಾರಾಮೇಡಿಕಲ್ ಅಭ್ಯಾಸ ಮಾಡುತ್ತಿದ್ದಳಂತೆ. ಕಳೆದ ದಿನ ಸಂಜೆ ಮನೆಯಿಂದ ಲ್ಯಾಬ್ ಗೆ ಹೋಗುವದಾಗಿ ಮನೆಯಿಂದ ಯುವತಿ ಆಚ್ಚೆಕಡೆ ಬಂದಿದ್ದಳಂತೆ. ಸದ್ಯ ಯುವತಿಯ ಮುಖಕ್ಕೆ‌ ಮೊದಲು ಹಲ್ಲೆ ಮಾಡಿರುವ ಹಂತಕ. ಅವಳ ವೆಲ್‌ ದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ಪ್ರಾಥಮಿಕ ತನಿಖೆಯ ಬಳಿಕ ಅಸಲಿ ಸತ್ಯ ಹೊರಬರಬೇಕಾಗಿದೆ.

Tags:

error: Content is protected !!