ಕೃಷ್ಣಾ ನದಿಯಲ್ಲಿ ಸುಮಾರು ಮೂರು ಟಿಎಂಸಿ ನೀರು ಹಿಪ್ಪರಗಿ ಆಣೆಕಟ್ಟಿಯ ಗೇಟ್ ನಂಬರ್ 22 ಮುರಿದು ನಿರು ಹರಿದು ಹೋಗಿದೆ. ಇದರಿಂದ ಬರುವ ಒಂದು ತಿಂಗಳಿನಲ್ಲಿ ನದಿಯಲ್ಲಿ ನೀರಿಲ್ಲದೆ ಬತ್ತಿ ಹೋಗುವುದು.

ಇದನ್ನು ಗಮನಿಸಿ ಇದೇ ತಿಂಗಳಲ್ಲಿ ಜರುಗುವ ಅಧಿವೇಶನದಲ್ಲಿ ಪ್ರಸ್ತಾಪಿಸಿ ಇಲ್ಲಿಯ ಚಿಕ್ಕೋಡಿ, ಅಥಣಿ, ಕಾಗವಾಡ, ಜಮಖಂಡಿ ತಾಲೂಕಿನ ಎಲ್ಲ ಶಾಸಕರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಎರಡು ಟಿಎಂಸಿ ನೀರು ಕೊಯ್ನಾಣೆಕಟ್ಟಿಯಿಂದ ನದಿಗೆ ಹರಿದು ಬಿಡಲು ಪ್ರಸ್ತಾವ ಸಲ್ಲಿಸಲಿದ್ದೇವೆ ಎಂದು ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಹೇಳಿದರು.
ಮಂಗಳವಾರ ರಂದು ಕವಲಗುಡ್ಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಶಾಸಕ ರಾಜು ಕಾಗೆ ಮಾತನಾಡುವಾಗ ಹಿಪ್ಪರಗಿ ಅಣೆಕಟ್ಟುಯಿಂದ ಸುಮಾರು ಮೂರು ಟಿಎಂಸಿ ನೀರು ಹರಿದುಹೋಗಿದೆ. ಇದರಿಂದ ಲಕ್ಷಾಂತರ ಬೆಲೆ ಹೊಳ್ಳುವ ಬೆಲೆಗಳಿಗೆ, ಜನ ಜಾನುವಾರಗಳಿಗೆ ಉಡಿವ ನೀರು ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಉಂಟಾದರೆ ಬಹಳಷ್ಟು ಸಂಕಷ್ಟ ಬರಲಿದೆ ಇದನ್ನು ಗಮನದಲ್ಲಿ ತೆಗೆದುಕೊಂಡು ಮಹಾರಾಷ್ಟ್ರ ಸರ್ಕಾರಕ್ಕೆ ಭೇಟಿಯಾಗಿ ನೀರಿಗಾಗಿ ತುಂಬುವ ಹಣ ಬರಿಸಿ ನೀರು ತೆಗೆದುಕೊಳ್ಳುವ ನಾವು ಪ್ರಯತ್ನಿಸುತ್ತೇವೆ.
ಎಂದು ಶಾಸಕ ರಾಜು ಕಾಗಿ ಹೇಳಿ ಹಿಪ್ಪರಗಿ ಆಣೆಕಟ್ಟಿಯ ಗೇಟ್ ಮುಖಾಂತರ ಈಗಲೂ 5 ಹೆಚ್ ಪಿ ದಷ್ಟು ನೀರು ಹರಿದು ಹೋಗುತ್ತದೆ ಅದು ತೆಗೆದುಕೊಳ್ಳಿ ಪ್ರಯತ್ನಿಸುವ ಬಗ್ಗೆ ಅಭಿಯಂತರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸಂಪುಟ ವಿಸ್ತರಣೆವಾದರೆ ತಾವು ಆಕಾಂಕ್ಷಿಗಳು ಇದ್ದೀರೆ ಏನು ಎಂದು ಪ್ರಶ್ನಿಸಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಂದು ನೂರ ನಲವತ್ತು ಶಾಸಕರು ಚುನಾಯಿತಗೊಂಡಿದ್ದಾರೆ ಈ ಎಲ್ಲ ಶಾಸಕರು ಸಚಿವರಾಗಲು ಸಾಧ್ಯವಿಲ್ಲ. ಬೇರೆಯವರು ಸಚಿವರಾದರೆ ನನಗೆ ತೃಪ್ತಿ ತರುತ್ತದೆ ಎಂದು ಸ್ಪಷ್ಟವಾಗಿ ಹೇಳಿದರು.
