Chikkodi

ವಿಜೃಂಭಣೆಯಿಂದ ಜರುಗಿದ ಯಡೂರಿನ ಶ್ರೀವೀರಭದ್ರೇಶ್ವರ ಮಹಾರಥೋತ್ಸವ

Share

ಚಿಕ್ಕೋಡಿ:ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ ಅದ್ದೂರಿಯಾಗಿ ಜರುಗಿತು.

ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ಜರುಗಿದ ಮಹಾರಥೋತ್ಸಕ್ಕೆ ಶ್ರೀಶೈಲ್ ಜಗದ್ಗುರು ಡಾ! ಚನ್ನಸಿದ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಮುಕ್ತಿ ಮಂದಿರದ ಭೂತರಾಮನಟ್ಟಿಯ ಶಿವಸಿಧ್ದ ಸೋಮೇಶ್ವರ ಸ್ವಾಮೀಜಿ, ಹಿರೇಮುನ್ನೂಳಿಯ ಶಾಂಡಿಲೇಶ್ವರ ಮಠದ ಶಂಭೂಲಿಂಗ ಸ್ವಾಮೀಜಿಯವರು ಚಾಲನೆಯನ್ನು ನೀಡಿದರು.ರಥೋತ್ಸವ ಪ್ರಾರಂಭವಾಗುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಭಕ್ತರು ಹರ ಹರ ಮಹಾದೇವ, ಶ್ರೀವೀರಭದ್ರ ಮಹಾರಾಜಕೀಯ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.ರಥ ಹೋಗುತ್ತಿದ್ದಂತೆ ಭಕ್ತರು ಖಾರಿಕ್,ಕೊಬ್ಬರಿ,ಸಕ್ಕರೆಯನ್ನು ಅತ್ಯಂತ ಭಕ್ತಿಭಾವದಿಂದ ಅರ್ಪಿಸಿದರು.

ಮಹಾರಥೋತ್ಸವ ಉದ್ದಕೂ ಸಕಲವಾದ್ಯಮೇಳ,ಕುದುರೆ,ನಂದಿಕೋಲಗಳು ಗಮನಸೇಳೆದವು.ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯುವಕರು ನಾ ಮುಂದೆ ನೀ ಮುಂದೆ ಎನ್ನುತ್ತಾ ರಥವನ್ನು ಎಳೆದರು. ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಪ್ರಾರಂಭವಾದ ರಥೋತ್ಸವ ಚೆನ್ನಮ್ಮಾ ವೃತ್ತದ ಮೂಲಕ ಹಳೇ ಯಡೂರ ಬಸವೇಶ್ವರ ದೇವಸ್ಥಾನದವರಗೆ ಸಾಗಿತ್ತು.ಮತ್ತೆ ವೀರಭದ್ರೇಶ್ವರ ದೇವಸ್ಥಾನದ ಹತ್ತಿರದ ರಥದ ಮನೆಯ ಹತ್ತಿರ ಬಂದು ಮಹಾರಥೋತ್ಸವ ಸಂಪನ್ನಗೊಂಡಿತ್ತು. ಇನ್ನೂ ಈ ಮಹಾರಥೋತ್ಸವ ನೋಡಲು ಕರ್ನಾಟಕ, ಮಹಾರಾಷ್ಟ್ರ,ಆಂದ್ರಪ್ರದೇಶದ ಸೇರಿದಂತೆ ದೇಶದ ವಿವಿಧ ಜನರು ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಹೂಲಿ ಹಿರೇಮಠ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೈಸಾಳದ ಶಿವಯೋಗಿ ಶಿವಾಚಾರ್ಯ, ಕಬ್ಬೂರಿನ ಗೌರಿಶಂಕರ,ಕರಿಬಂಟನಾಳದ,ಶಿವಕುಮಾರ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!