Chikkodi

ಶ್ರೀಶೈಲ್ ಜಗದ್ಗುರುಗಳಿಂದ ಯಡೂರ ಕ್ಷೇತ್ರದ ಅಭಿವೃದ್ಧಿ

Share

ಚಿಕ್ಕೋಡಿ:ಶ್ರೀಶೈಲ್ ಜಗದ್ಗುರುಗಳು ಯಡೂರ ಶ್ರೀವೀರಭದ್ರೇಶ್ವರ ಹಾಗೂ ಕಾಡಸಿದ್ದೇಶ್ವರ ಮಠದ ಅಧಿಕಾರ ವಹಿಸಿಕೊಂಡ ಬಳಿಕ ಯಡೂರ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗಿದೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ!ಪ್ರಭಾಕರ ಕೋರೆ ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರಾಮಹೋತ್ಸವ ಅಂಗವಾಗಿ ಧರ್ಮಜಾಗೃತಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಮಾಜದ ಚಿಂತನೆಗಾಗಿ ಶ್ರೀಶೈಲ್ ಶ್ರೀಗಳು ಕಳೆದ ವರ್ಷ ಯಡೂರದಿಂದ ಶ್ರೀಶೈಲ್ ದವರೆಗೆ ಪಾದಯಾತ್ರೆ ಮಾಡಿರುವುದು ಪ್ರಶಂಸನೀಯ.
ಧರ್ಮವಿಲ್ಲದ ಜಾಗವಿಲ ಮನುಷ್ಯನ ಅಂತರಂಗದ ವಿಕಾಸಕ್ಕೆ ಧಾರ್ಮಿಕ ಸಂಸ್ಕಾರ ಅಗತ್ಯವಾಗಿದೆ ಎಂದರು.

ಪ್ರಭಾಕರ ಕೋರೆ,ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಯಡೂರ ಶ್ರೀವೀರಭದ್ರ ಕ್ಷೇತ್ರವು ದಕ್ಷಿಣದ ಎರಡನೇ ಕಾಶೀಯಾಗಿದೆ.ಶ್ರೀಶೈಲ್ ಶ್ರೀಗಳಿಂದ ಯಡೂರ ಕ್ಷೇತ್ರವು ಅಭಿವೃದ್ಧಿ ಹೊಂದಿ ಸಂಭ್ರಮ ಪಡಯವ ಸಂತಸ ಕ್ಷಣವಾಗಿದೆ‌.ದೇವ,ದೇಶ,ಧರ್ಮಗಳನ್ನು ಉಳಿಸುವ ಅಗತ್ಯಗತೆ ಇದೆ.ಎಂದರು.ಭವ್ಯ ಭಾರತದ ಪರಂಪರೆಯನ್ನು ಅಧ್ಯಾತ್ಮಿಕತೆಯನ್ನು ಉಳಿಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.

ಶಶಿಕಲಾ ಜೊಲ್ಲೆ,ಶಾಸಕಿ

ಸಾನಿಧ್ಯವನ್ನು ವಹಿಸಿದ್ದ ಶ್ರೀಶೈಲ್ ಜಗದ್ಗುರಗಳು ಮಾತನಾಡಿ ಯಡೂರ ಕ್ಷೇತ್ರವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ.ಬರುವ ಮಾರ್ಚ ನಡೆಯುವ ಕೃಷ್ಣಾರತಿ,ಕುಂಭಮೇಳ,ಲಕ್ಷದ್ವೀಪೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ ಎಂದರು

ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು.ಇದಕ್ಕೂ ಮುಂಚೆ ಲಾತೂರ ಜಿಲ್ಲೆಯ ಶ್ರೀನಾಥ ಪಂಚಮ ಪೀಠಾಧಿಪತಿ ಗುರುಬಾಬಾ ಮಹಾರಾಜರು ಹಾಗೂ ಅವರ ತಂಡದಿಂದ ಚಕ್ರಿ ಭಜನೆ ಮನಸೂರಗೊಂಡಿತ್ತು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ,ಯಡೂರ ಶ್ರೀವೀರಭದ್ರೇಶ್ವರ ದೇವಾಲಯ,ಕಾಡಸಿದ್ದೇಶ್ವರ ಮಠದ ಉತ್ತರಾಧಿಕಾರಿ, ರೇಣುಕ ದೇವರು,ಹಿಪ್ಪರಗಿ ಮಠದ ಉತ್ತರಾಧಿಕಾರಿಗಳಾದ ಅಭಿಷೇಕ ದೇವರು,ಮಲ್ಲಿಕಾರ್ಜುನ ಕೋರೆ,ಅಜೀತರಾವ ದೇಸಾಯಿ,ರಣಜೀತರಾವ ದೇಸಾಯಿ,ಸಂತೋಷಿ ಧನಗರ ಉಪಸ್ಥಿತರಿದ್ದರು. ಮಲ್ಲಪ್ಪ ಸಿಂಧೂರ,ಸುಭ್ರಾವ ಎಂಟಹತ್ತಿನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!