Kagawad

ಶ್ರೀ ಸಿದ್ದೇಶ್ವರ ಜಾತ್ರೆ ನಿಮಿತ್ತ ರೋಚಕ ಎತ್ತು-ಕುದುರೆ ಗಾಡಿ ಶರ್ಯತ್ತು;

Share

ಐನಾಪುರ (ಕಾಗವಾಡ): ಇಲ್ಲಿನ ಐತಿಹಾಸಿಕ ಶ್ರೀ ಸಿದ್ದೇಶ್ವರ ದೇವರ 56ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಒಂದು ಎತ್ತು ಹಾಗೂ ಒಂದು ಕುದುರೆ’ ಗಾಡಿಗಳ ಮುಕ್ತ ಶರ್ಯತ್ತು ಅತ್ಯಂತ ರೋಚಕವಾಗಿ ಜರುಗಿತು. ಈ ಸಾಹಸಮಯ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಗಡಿ ಭಾಗದ ಸಾವಿರಾರು ಯುವಕರು ಹಾಗೂ ಭಕ್ತರು ಜನಸಾಗರವನ್ನೇ ಹರಿಸಿದ್ದರು.

ಶನಿವಾರ ಬೆಳಿಗ್ಗೆ ಮೊಳೆ-ಐನಾಪುರ ಮಾರ್ಗದಲ್ಲಿ ನಡೆದ ಈ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಒಟ್ಟು 10 ಗಾಡಿಗಳು ಪಾಲ್ಗೊಂಡಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಓಟದಲ್ಲಿ ಮಹಾರಾಷ್ಟ್ರದ ಮೀರಜ್ ತಾಲೂಕಿನ ನರವಾಡ ಗ್ರಾಮದ ಸಚಿನ್ ಕಟ್ಟಿಕರ್ ಅವರ ಗಾಡಿಯು ಪ್ರಥಮ ಸ್ಥಾನವನ್ನು ಅಲಂಕರಿಸಿತು. ವಿಜೇತರಿಗೆ ಮಹಾವೀರ ಬ್ಯಾಳಿ ಅವರು 20 ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡಿ ಗೌರವಿಸಿದರು.ದ್ವಿತೀಯ ಸ್ಥಾನ: ಕಿರಣ್ ನಾಯಕ್ (ಆರಗ ಗ್ರಾಮ, ಮೀರಜ್ ತಾಲೂಕು) – ಇವರಿಗೆ ಪವನ ರೆಸಿಡೆನ್ಸ್ ವತಿಯಿಂದ ಬಹುಮಾನ ನೀಡಲಾಯಿತು.ತೃತೀಯ ಸ್ಥಾನ: ಅಮಶಿಧ ಅಡಿಶೆರಿ (ಐನಾಪುರ). ನಾಲ್ಕನೇ ಸ್ಥಾನ: ಗೋಪಾಲ ಅಪರಾಜ ತಮ್ಮದಾಗಿಸಿಕೊಂಡರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಜಾತ್ರಾ ಕಮಿಟಿ ಅಧ್ಯಕ್ಷರಾದ ದಾದಾ ಜಂತನವರ್, ಅನ್ನಾಸಾಹೇಬ ದುಗುನವರ್, ರಾಕೇಶ್ ಬನಿಜವಾಡ, ಗೋಪಾಲ ಮಾನಗಾಂವೆ, ತಾತ್ಯಾಸಾಹೇಬ ಕೂರಬು ಸೇರಿದಂತೆ ಊರಿನ ಪ್ರಮುಖರು ಹಾಗೂ ಕಮಿಟಿಯ ಸದಸ್ಯರು ಉಪಸ್ಥಿತರಿದ್ದು ವಿಜೇತರಿಗೆ ಶುಭ ಹಾರೈಸಿದರು.
ಗಡಿ ಭಾಗದಲ್ಲಿ ಈ ಶರ್ಯತ್ತು ವಿಶೇಷ ಆಕರ್ಷಣೆಯಾಗಿದ್ದು, ರೈತರು ಹಾಗೂ ಕ್ರೀಡಾಭಿಮಾನಿಗಳ ನಡುವೆ ಸೌಹಾರ್ದತೆ ಮೂಡಿಸುವ ವೇದಿಕೆಯಾಯಿತು.

Tags:

error: Content is protected !!