hubbali

2028 ರವರಗೆ ಸಿಎಂ ಕುರ್ಚಿ ಖಾಲಿ ಇಲ್ಲ : ಸಚಿವ ಜಮಿರ್ ಅಹ್ಮದ್

Share

ನವೆಂಬರ್ ಕ್ರಾಂತಿ ಮುಗಿತು ಕ್ರಾಂತಿನೂ ಇಲ್ಲಾ ಬ್ರಾಂತಿನೂ ಇಲ್ಲಾ. 2028 ರವರಗೆ ಸಿಎಂ ಕುರ್ಚಿ ಖಾಲಿಯಿಲ್ಲಾ ಅಲ್ಲಿವರಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆಂದು ವಸತಿ ಸಚಿವ ಜಮಿರ್ ಅಹ್ಮದ್ ಖಾನ್ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರರು. ಸಿಎಂ ಬದಲಾವಣೆ ಹೈಕಮಾಂಡ್ ನಿಂದ ಮಾತ್ರ ನಿರ್ಧಾರ. ಸಿಎಂ ಬದಲಾವಣೆ ನಮ್ಮ ಕೈಯಲ್ಲಿಲ್ಲಾ
ಹೈಕಮಾಂಡ್ ಯಾರನ್ನು ಮಾಡ್ತಾರೆ ನಾವು ಒಪ್ಪಿಕೊಳ್ಳುತ್ತೇವೆ. ಬೀದಿ ದಾಸಯ್ಯನನ್ನು ಮಾಡಿದ್ರು ನಾವು ಒಪ್ಪಿಕೊಳ್ಳುತ್ತೇವೆ ಎಂದರು.
ಮಂತ್ರಿಯಾಗಬೇಕು ಅಂತ ಬಹಳ ಜನರಿಗೆ ಆಸೆ ಇದ್ದೆ ಇರುತ್ತದೆ ಎಂದರು.

ಬಳ್ಳಾರಿ ಬಿಜೆಪಿ ಪಾದಯಾತ್ರೆ ವಿಚಾರ

ಆ ಘಟನೆ ಆಗಬಾರದಿತ್ತು, ಆಗಿದೆ ಬ್ಯಾನರ್ ವಿಚಾರದಲ್ಲಿ ಜನಾರ್ದನ ರೆಡ್ಡಿ ದೊಡ್ಡ ಮನಸು ಮಾಡಬೇಕಿತ್ತು. ಅವರು ಮಾಡೋ ಕಾರ್ಯಕ್ರಮಕ್ಕೆ ಶಹಬಾಸ್ ಗಿರಿ ನೀಡಬೇಕಿತ್ತು. ಇದೀಗ ಏನು ಅಂತ ಪಾದಯಾತ್ರೆ, ಕಾರ್ಯಕ್ರಮ ಮಾಡ್ತಾರೆ ಎಂದರು.

ಹುಬ್ಬಳ್ಳಿ ಯಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಮನೆ ಹಂಚಿಕೆ

ಜನವರಿ 24 ರಂದು ರಾಜ್ಯದಲ್ಲಿ 42,345 ಮನೆಗಳ ಹಂಚಿಕೆ ಮಾಡುತ್ತೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಒಂದು ಮನೆ ಕೂಡಾ ನೀಡಲಿಲ್ಲಾ. ಬಡವರ ಮನೆಗೆ ಕೇಂದ್ರ 18 ರಷ್ಟು ಜಿಎಸ್ ಟಿ ಹಾಕುತ್ತಿದೆ.2024 ರಲ್ಲಿ 36789 ಮನೆಗಳನ್ನು ನೀಡಿದ್ದೆವು. ಎರಡು ತಿಂಗಳ ನಂತರ ಇನ್ನು ಮೂವತ್ತು ಸಾವಿರ ಮನೆಗಳನ್ನು ನೀಡುತ್ತೇವೆ
ಬಿಜೆಪಿಯವರು ಗ್ಯಾರಂಟಿ ವಿರೋಧಿಸುತ್ತಾರೆ.
ಆದ್ರೆ ಗ್ಯಾರಂಟಿ ಕೊಟ್ಟ ಮೇಲೂ ನಾವು ಮನೆಗಳನ್ನು ನೀಡ್ತಿದ್ದೇವೆ. ಆದ್ರೆ ಬಿಜೆಪಿಯವರ ಅವಧಿಯಲ್ಲಿ ಯಾವುದೇ ಗ್ಯಾರಂಟಿ ಇರಲಿಲ್ಲಾ
ಆದ್ರು ಒಂದು ಮನೆ ಕೂಡಾ ಬಿಜೆಪಿ ನೀಡಲಿಲ್ಲಾ ಎಂದರು.

Tags:

error: Content is protected !!