ಬೆಳಗಾವಿ : ಎಳೆಬೈಲ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶ್ರೀ ಜಗದ್ಗುರು ತುಕಾರಾಂ ಗಾಥಾ ಪಾರಾಯಣ ಹಾಗೂ ಭವ್ಯ ರಿಂಗಣ ಸೋಹಳಾ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸಿದರು.

ವಾರಕರಿ ಸಂಪ್ರದಾಯದ ಈ ಅದ್ಭುತ ಆಚರಣೆಯನ್ನು ಕಣ್ತುಂಬಿಕೊಂಡು, ಭಜನೆ-ಪಾರಾಯಣದಲ್ಲಿ ಭಾಗವಹಿಸಿದ ಸಚಿವರು, ಶ್ರೀ ವಿಠ್ಠಲ-ರುಕ್ಮಾಯಿಯ ಆಶೀರ್ವಾದ ಪಡೆದು, ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.
ಸಂಕ್ರಾಂತಿ ಶುಭಾಶಯ
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹುಕ್ಕೇರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಬೆಳಗಾವಿಯ ಗೃಹ ಕಚೇರಿಗೆ ಆಗಮಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಶುಭಾಶಯ ಕೋರಿ ಸನ್ಮಾನಿಸಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಚೇತನ್ಕುಮಾರ್, ಬೆಳಗಾವಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ಖಾನಾಪುರ ತಾಲೂಕಿನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಕ್ರಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು
