BELAGAVI

ಜಿಲ್ಲಾ ಕ್ರೀಡಾ ಭಾರತಿ ಸಂಘದ ಸಭೆ ಯಶಸ್ವಿ

Share

ಗುಡ್‌ಶೆಡ್ ರಸ್ತೆಯಲ್ಲಿರುವ ವಿಮಲ್ ಫೌಂಡೇಶನ್ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲಾ ಕ್ರೀಡಾ ಭಾರತಿ ಸಂಘದ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಕಾರ್ಯದರ್ಶಿ ಅಶೋಕ ಶಿಂತ್ರೆ ವಹಿಸಿದ್ದರು, ವಿಮಲ್ ಫೌಂಡೇಶನ್ ಅಧ್ಯಕ್ಷ ಕಿರಣ ಜಾಧವ, ರಾಘವೇಂದ್ರ ಕಾಗವಾಡ ಉಪಸ್ಥಿತರಿದ್ದರು.

ಕರ್ನಾಟಕ ಉತ್ತರ ಪ್ರಾಂತ್ಯ ಜಂಟಿ ಕಾರ್ಯದರ್ಶಿ ವಿಶ್ವಾಸ ಪವಾರ ಸಭೆಯ ಉದ್ದೇಶವನ್ನು ವಿವರಿಸಿದರು.

ಫೆಬ್ರವರಿ 13, 14 ಮತ್ತು 15 ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಖಿಲ ಭಾರತ ಕ್ರೀಡಾ ಭಾರತಿ ನಿಯಂತ್ರಕ ಮಹಾಸಭೆಯ ಕುರಿತು ಕಿರಣ ಜಾಧವ ಮತ್ತು ಅಶೋಕ ಶಿಂತ್ರೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಖಿಲ ಭಾರತ ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳು ಮೂರು ದಿನಗಳ ಕಾಲ ಬೆಳಗಾವಿಗೆ ಬರಲಿದ್ದು, ಈ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಆಳವಾಗಿ ಚರ್ಚಿಸಲಾಗುವುದು. ಬೆಳಗಾವಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಮಿಸ್ಟರ್ ಇಂಡಿಯಾ ಸುನೀಲ್ ಆಪ್ಟೇಕರ್, ಗುರುದತ್ತ ಕುಲಕರ್ಣಿ, ಮೋಹನ ಪತ್ತಾರ, ಆರ್.ಪಿ.ವಂಟಗುಡಿ, ಉಮೇಶ ಕುಲಕರ್ಣಿ, ನಾಮದೇವ ಮಿರಜಕರ, ಜೈಸಿಂಗ್ ಧನಾಜಿ, ಉಮೇಶ ಬೆಳಗುಂದಕರ, ಚಂದ್ರಕಾಂತ ಪಾಟೀಲ, ಮಯೂರಿ ಪಿಂಗಟ್ ಮೊದಲಾದವರು ಉಪಸ್ಥಿತರಿದ್ದರು.

Tags:

error: Content is protected !!