ಬೆಳಗಾವಿ ಸುಪ್ರಸಿದ್ಧ ಉದ್ಯಮಿ ಉದಯಕುಮಾರ ತೇರಣಿ (59) ಇಂದು ಕಾರ್ಡಿಯಾಕ್ ಅರೆಸ್ಟ್’ನಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರು ವೆಂಕಟೇಶ್ ಸ್ಟೋರ್ಸ್’ನ ಸಂಚಾಲಕರಾಗಿದ್ದರು. ಮೃತರ ಅಂತ್ಯಕ್ರಿಯೆಯೂ ಇಂದು ಮಧ್ಯಾನ್ಹ 12 ಗಂಟೆಗೆ ಸದಾಶಿವನಗರದ ರುದ್ರಭೂಮಿಯಲ್ಲಿ ನೆರವೇರಲಿದೆ. ಉದಯಕುಮಾರ್ ತೇರಣಿ ಅವರು ಬೆಳಗಾವಿಯಲ್ಲಿ ರಿದ್ಧಿ ವಿಜ್ಹನ್ ಆರಂಭವಾಗಿನಿಂದ ಮೆಟ್ರೋಕಾಸ್ಟ್ ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್ ಆಗಿ ರೂಪುಗೊಳ್ಳುವವರೆಗೂ ಸಂಚಾಲಕರಾದ ದಿವಂಗತ ನಿಶಾ ಛಾಬ್ರಿಯಾ ಮತ್ತು ನಾಗೇಶ್ ಛಾಬ್ರಿಯಾ ಅವರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿ ಸಂಸ್ಥೆಯ ಏಳ್ಗೆಗೆ ಪಾತ್ರರಾಗಿದ್ದರು. ಇವರ ಸಂಬಂಧ ಸಂಸ್ಥೆಯೊಂದಿಗೆ ಇಷ್ಟು ಘನಿಷ್ಠವಾಗಿತ್ತೆಂದರೇ, ಇವರು ಮೆಟ್ರೋಕಾಸ್ಟ್ ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್’ನ ಒಂದು ಭಾಗವಾಗಿದ್ದರು ಎಂದರೇ ತಪ್ಪಾಗಲಾರದು. ಉದಯಕುಮಾರ್ ತೇರಣಿ ಗಾಣಿಗ ಸಮಾಜ ಪ್ರತಿಷ್ಠಿತ ಸಮಾಜದ ಓರ್ವ ಪ್ರತಿಷ್ಠಿತ ನಾಗರೀಕರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದು, ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಮೆಟ್ರೋಕಾಸ್ಟ್ ಇಂಡಿಯಾ ಪ್ರೈವೇಟ್ ಇಂಡಿಯಾ ಲಿಮಿಟೆಡ್’ನ ಸಂಚಾಲಕರಾದ ನಾಗೇಶ್ ಛಾಬ್ರಿಯಾ ಅವರು ಪ್ರಾರ್ಥಿಸಿದ್ದಾರೆ.
