hubbali

ಕುಂದಗೋಳದಲ್ಲಿ 10th ಕ್ಲಾಸಿನ್ ಲಿಂಗರಾಜನ ಕುತ್ತಿಗೆಗೆ ಚಾಕು ಇರಿದು ಕೊಲೆ:

Share

ಕುಂದಗೋಳ ಪಟ್ಟಣದ ಸೊಸೈಟಿ ಹಿಂಭಾಗದಲ್ಲಿ 10 ನೇ ತರಗತಿ ಲಿಂಗರಾಜ ಎಂಬ ಬಾಲಕನ ಕೊಲೆಯ ಪ್ರಕರಣದ ಕುರಿತು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಂದಗೋಳ ಪೊಲೀಸರಿಂದ ಕೆಲವು ಪ್ರಾಥಮಿಕ ಮಾಹಿತಿಯನ್ನು ಪಡೆದಿದ್ದಾರೆ.

ಇಂದು ಸಾಯಂಕಾಲ ಕೊಲೆಯಾದ ಲಿಂಗರಾಜ ಹಾಗೂ ಆತನ ಕೆಲವು ಸ್ನೇಹಿತರು ಪಟ್ಟಣದ ಸೊಸೈಟಿ ಹಿಂಭಾಗದಲ್ಲಿ ಕ್ಷುಲ್ಲಕ ವಿಚಾರಕ್ಕೇ ಜಗಳ ತೆಗೆದು ಆತನ ಕುತ್ತಿಗೆ ಹಾಗೂ ಬೆನ್ನಿಗೆ ಚಾಕು ಇರಿದ ಪರಿಣಾಮ ತೀವ್ರ ರಕ್ತ ಸಾವ್ರದಿಂದ ಲಿಂಗರಾಜ ಸ್ಥಳದಲ್ಲೇ ಮೃತಟ್ಟಿದ್ದಾನೆ. ಲಿಂಗರಾಜ ಸತ್ತಿದ್ದಾನೆ ಎಂದು ಗೊತ್ತಾದ ಕೂಡಲೇ ಆತನ ಸ್ನೇಹಿತರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಸದ್ಯ ಯಾವ ಕಾರಣಕ್ಕಾಗಿ ಆತನ ಸ್ನೇಹಿತರು ಲಿಂಗರಾಜನನ್ನು ಕೊಲೆ ಮಾಡಿದ್ದಾರೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ ಕೊಲೆ ಮಾಡಿದ ಆರೋಪಿಗಳು ಸಿಕ್ಕ ನಂತರ ಮಾತ್ರವೇ ಕೊಲೆಗೆ ನಿಖರ ಕಾರಣ ತಿಳಿಯುತ್ತದೆ, ಲಿಂಗರಾಜ ಕೊಲೆಯ ಕುರಿತು ಆತನ ತಂದೆ ಮೂವರ ವಿರುದ್ಧ ದೂರು ದಾಖಲು ಮಾಡಿದ್ದೂ,ದೂರಿನನ್ವಯ ತನಿಖೆ ನಡೆಸಲಾಗುತ್ತದೆ ಎಂದು SP ಗುಂಜನ್ ಆರ್ಯ ಹೇಳಿದ್ದಾರೆ.

ಕುಂದಗೋಳ ಪಟ್ಟಣದಲ್ಲಿ ನಡೆದ 10 ನೇ ಕ್ಲಾಸ್’ನ ವಿದ್ಯಾರ್ಥಿ ಲಿಂಗರಾಜ ಕೊಲೆ ಇಡಿ ತಾಲೂಕಿನ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ, ಇಷ್ಟು ಚಿಕ್ಕ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನಸ್ಸು ಕೊಲೆ ಮಾಡುವ ಹಂತಕ್ಕೆ ಹೋಗುತ್ತಿರೋದು ಆತಂಕದ ವಿಷಯವಾಗಿದೆ. ಸದ್ಯ ಕುಂದಗೋಳ ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಜಾಲವನ್ನು ಬೀಸಿದ್ದಾರೆ.

Tags:

error: Content is protected !!