ಮೊನ್ನೆಯಷ್ಟೇ ಧಾರವಾಡದ ಕೆಎಂಎಫ್ ಹಿಂಭಾಗದ ನಿರ್ಮಲ ನಗರದ ಮನೆಯೊಂದರಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ ನೇಪಾಳ ಮೂಲದ ಬಿಬೇಕ್ (40) ಎಂಬ ವ್ಯಕ್ತಿಯ ಶವ ಸಂಸ್ಕಾರವನ್ನು ಧಾರವಾಡದಲ್ಲೇ ಮಾಡಲಾಗಿದೆ.

ವೈ- ಧಾರವಾಡದ ಚಿಂಗ್ಸ್ ಚೌ ಎಂಬ ಹೋಟೆಲ್‌ನಲ್ಲಿ ಕೆಲಸ ಮಾಡಲು ನೇಪಾಳ ಮೂಲದ ಏಳೆಂಟು ಜನ ಬಂದಿದ್ದರು. ಇವರಿಗೆ ಹೋಟೆಲ್ ಮಾಲೀಕರು ಇರಲು ಮನೆ ಕೂಡ ಕೊಟ್ಟಿದ್ದರು. ಮನೆಯಲ್ಲಿ ಇವರು ಶುಕ್ರವಾರ ರಾತ್ರಿ ಚಿಕನ್ ಬಾರ್ಬಿ ಮಾಡಿ ಊಟ ಮಾಡಿದ್ದರು. ಮಲಗುವಾಗ ಒಲೆ ಆರಿಸದೇ ಹಾಗೇ ಬಿಟ್ಟಿದ್ದರಿಂದ ಹೊಗೆ ಮನೆ ತುಂಬ ಆವರಿಸಿ ಮನೆಯಲ್ಲಿದ್ದ 8 ಜನ ನೇಪಾಳ ಮೂಲದವರ ಪೈಕಿ ಬಿಬೇಕ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಬಿಬೇಕ್ ಅವರ ಶವವನ್ನು ನೇಪಾಳಕ್ಕೆ ತೆಗೆದುಕೊಂಡು ಹೋಗಲು ಆಗದ ಕಾರಣ, ಬಿಬೇಕ್ ಅವರ ಸಹೋದರ ಬಿಜ್ಞಾನ ಎಂಬುವವರು ಧಾರವಾಡಕ್ಕೆ ಬಂದು ಶವವನ್ನು ತಮ್ಮ ಸುಪರ್ದಿಗೆ ಪಡೆದು ಧಾರವಾಡದಲ್ಲೇ ತಮ್ಮ ಸಹೋದರನ ಅಂತ್ಯಕ್ರಿಯೆ ಮಾಡಿದ್ದು, ಅಂತ್ಯಕ್ರಿಯೆಗೆ ಹುಬ್ಬಳ್ಳಿ ಧಾರವಾಡ ಕಮಿಷನರ ಸಹಾಹಸ್ತ ಚಾಚ್ಚಿದ್ದಾರೆ.
