ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಕುರಿತಾದ ಗೊಂದಲಗಳು ಈಗ ಬಹಿರಂಗವಾಗಿದ್ದು, ಇದು ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಆದ್ದರಿಂದ ಅವುಗಳನ್ನು ಹೈಕಮಾಂಡ್ ಕೂಡಲೇ ಪರಿಹಾರ ನಡೆಸಬೇಕೆಂದು ಹೇಳಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ಧರಾಮಯ್ಯ ಯಾವುದೇ ಗೊಂದಗಳಿಲ್ಲ ಎನ್ನುತ್ತಿದ್ದಾರೆ. ಆದರೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿದ್ಧರಾಮಯ್ಯನವರು ಮಾತು ಕೊಟ್ಟಿದ್ದಾರೆಂದು ಹೇಳುತ್ತಿದ್ದಾರೆ. ಮಾತು ಕೊಟ್ಟಿಲ್ಲವೆಂದು ಸಿಎಂ ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಪಕ್ಷದ ಎಲ್ಲ ಗೊಂದಲಗಳಿಗೂ ಪರಿಹಾರ ಸಿಗಲಿ. ಈಗಾಗಲೇ ಸಿಎಂ ಡಿಸಿಎಂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಆದಷ್ಟು ಬೇಗ ಗೊಂದಲಗಳು ನಿವಾರಣೆಯಾಗಬೇಕು. ಇಲ್ಲದಿದ್ದರೇ, ಅದು ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಹೈಕಮಾಂಡ್ ಅವರು ಅಂತಿಮವಾಗಿ ಗೊಂದಲವನ್ನು ನಿವಾರಣೆ ಮಾಡಬೇಕು ಎಂದರು.
