Dharwad

ಧಾರವಾಡದ ನವಲಗುಂದ ಠಾಣೆ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: ಅಂತಾರಾಜ್ಯ ಮೊಬೈಲ್ ಕಳ್ಳರ ಸೆರೆ ,12ಲಕ್ಷದ 48 ಮೊಬೈಲ್ ವಶ.

Share

ಧಾರವಾಡ: ತೆಲಂಗಾಣ ಮೂಲದ ಮೂವರು ಅಂತಾರಾಜ್ಯ ಮೊಬೈಲ್ ಕಳ್ಳರನ್ನು ಬಂಧಿಸುವಲ್ಲಿ ಧಾರವಾಡದ ನವಲಗುಂದ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, 12 ಲಕ್ಷ ರೂ. ಕಿಮ್ಮತ್ತಿನ ವಿವಿಧ ಕಂಪನಿಯ 48 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನವಲಗುಂದ ಪಟ್ಟಣದ ಪ್ರವೀಣಗೌಡ ಗೋವಿಂದಗೌಡ ಪಾಟೀಲ ಎಂಬುವರ ಮೊಬೈಲ್ ಜ.9ರಂದು ಪಟ್ಟಣದ ಬಸ್‌ ನಿಲ್ದಾಣದಲ್ಲಿ ಕಳ್ಳತನವಾಗಿತ್ತು. ಈ ಕುರಿತು ಅವರು ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು 24 ಗಂಟೆಯಲ್ಲೇ ಹೊಸಪೇಟೆಯಲ್ಲಿ ಮೂವರನ್ನು ಬಂಧಿಸಿದ್ದಾರೆ.

ಧಾರವಾಡ ಎಸ್ಪಿ ಗುಂಜನ ಆರ್ಯ, ಉಪಾಧೀಕ್ಷಕ ವಿನೋದ ಮುಕ್ತದಾರ ಹಾಗೂ ಸಿಪಿಐ ರವಿಕುಮಾರ ಕಪ್ಪತನವರ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿ ಕಳ್ಳರಿಗೆ ಬಲೆ ಬೀಸಲಾಗಿತ್ತು. ಪಟ್ಟಣದ ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಅಡ್ಡಾಡುತ್ತಿದ್ದ ವ್ಯಕ್ತಿಗಳನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನಗಳಿಂದ ಗುರುತಿಸಿ, ಜತೆಗೆ ಜಾಡು ಹಿಡಿದು ವಿವಿಧ ಜಿಲ್ಲೆಗಳ ಪೊಲೀಸ್‌ ಸಿಬ್ಬಂದಿ ಸಹಾಯ ಪಡೆದು ಖದೀಮ ಕಳ್ಳರ ಬಂಧಿಸುವಲ್ಲಿ ಪೊಲೀಸರು ಯಶಸಿ್ವಿಯಾಗಿದ್ದಾರೆ.‌ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಲರಣ ದಾಖಲಾಗಿದೆ.

Tags:

error: Content is protected !!