ಹೊಸ ವರ್ಷದ ಸಂಭ್ರಮಾಚರಣೆಗೆ ಬೆಳಗಾವಿಯಲ್ಲಿ ಕ್ಷಣಗಣನೆ ಆರಂಭವಾಗಿದ್ದು ಇದೇ ಮೊದಲ ಬಾರಿಗೆ ನಗರದ ನಾರ್ವೇಕರ ಗಲ್ಲಿಯಲ್ಲಿ ಉಯ್ಯಾಲೆಯಲ್ಲಿ ಕುಳಿತ ಓಲ್ಡ್ ವುಮೆನ್ ಪ್ರತಿಕೃತಿ ನೋಡುಗರ ಕಣ್ಮನ ಸೆಳೆಯುತ್ತಿದೆ.

ಹೌದು ಪ್ರತಿಬಾರಿ ಓಲ್ಡ್ ಮ್ಯಾನ್ ಮಾಡಿ ದಹಿಸಿ ಹಳೆಯ ವರ್ಷದ ಕಹಿಯನ್ನು ದಹಿಸಿ, ಹೊಸ ವರ್ಷದ ಹೊಸತನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುತ್ತದೆ. ಆದರೇ, ಈ ಬಾರಿ ಬೆಳಗಾವಿಯ ನಾರ್ವೇಕರ ಗಲ್ಲಿಯಲ್ಲಿ ಉಯ್ಯಾಲೆಯಲ್ಲಿ ಕುಳಿತ ಓಲ್ಡ್ ವುಮೆನ್ ಪ್ರತಿಕೃತಿಯನ್ನು ತಯಾರಿಸಲಾಗಿದೆ. ಇದನ್ನ ನೋಡಿದರೇ ಥೇಟ್ ದೆವ್ವವನ್ನ ನೋಡಿದಂತೆ ಭಾಸವಾಗುತ್ತಿದೆ. ಇದೇ ಮೊದಲ ಬಾರಿಗೆ ಇಲ್ಲಿನ ಯುವಪಡೆ ಓಲ್ಡ್ ವುಮೇನ್ ಪ್ರತಿಕೃತಿಯಿನ್ನು ತಯಾರಿಸಿದೆ. ಇದನ್ನು ನೋಡಲು ಜನಸಾಗರ ಹರಿದು ಬರುತ್ತಿದೆ. ಕೆಲ ಚಿಕ್ಕಮಕ್ಕಳು ಇದನ್ನ ಕಂಡು ಭಯಗೊಳ್ಳುತ್ತಿದ್ದರೇ, ಕೆಲ ಮಕ್ಕಳು ಇದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಕೆಲ ಜನರು ಇದನ್ನ ಕಂಡು ಅಚ್ಚರಿಗೊಂಡರೇ, ಕೆಲ ಜನರು ಇದೇನಿದು ಓಲ್ಡ್ ವುಮೇನ್ ಎಂದು ಪ್ರಶ್ನಾರ್ಥ ಮನೋಭಾವದಲ್ಲಿಯೂ ಕಂಡು ಬರುತ್ತಿದ್ದಾರೆ.
