KHANAPUR

ಖಾನಾಪೂರ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಅಧಿಕಾರಿಗಳ ಅನುಪಸ್ಥಿತಿ:

Share

ಖಾನಾಪೂರ ತಾಲೂಕು ಪಂಚಾಯತಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಭೆಗೆ ಅಧಿಕಾರಿಗಳು ಗೈರುಹಾಜರಾಗುತ್ತಿದ್ದು, ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುವಲ್ಲಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ವಿಫಲರಾಗಿದ್ದಾರೆ. ತಾಲೂಕಿನಲ್ಲಿ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದಂತಹ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದೆ ಕೇವಲ ಕಾಟಾಚಾರಕ್ಕೆ ಸಭೆಗಳು ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾನಾಪೂರದ ತಾಲೂಕಾ ಪಂಚಾಯತ್ ಯಲ್ಲಿ ಪ್ರತಿ ತಿಂಗಳು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಮಿತಿಯ ಸಭೆಯು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ ಆದರೆ ಈ ಸಭೆಗಳಿಗೆ ತಾಲೂಕಾ ಮಟ್ಟದ ಕೆಲವು ಅಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಸಿಬಂದ್ದಿಗಳಿಗೆ ಕಳುಹಿಸಿ ಸಭೆಗೆ ಗೈರು ಹೊಡೆಯುತ್ತಾ ಬಂದಿದ್ದಾರೆ ಇದಕ್ಕೆ ಉದಾಹರಣೆ ಎಂಬಂತೆ ಖಾನಾಪೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಓ) ಅವರು ಸುಮಾರು ಸಭೆಗಳಿಗೆ ಬಾರದೆ ತನ್ನ ಸಿಬಂದಿಗಳಿಗೆ ಕಳುಹಿಸಿ ಜಾರಿಕೊಳ್ಳುವ ಪ್ರಕಾರ ನಡೆದಿತ್ತು ಅವರು ತಮ್ಮ ಮೂಲ ಕಚೇರಿಯಲ್ಲಿಯೂ ಕೂಡಾ ಸುಮಾರು ದಿನಗಳಿಂದ ಬಾರದೇ ಇರುವುದು ಇದರ ಬಗ್ಗೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಸದಸ್ಯರು ಅವರ ಕಚೇರಿಗೆ ಹೋಗಿ ವಿಚಾರಣೆ ನಡೆಸಿದ್ರು ಕೂಡಾ ಯಾವುದೇ ರೀತಿಯ ಪ್ರಯೋಜನವಾಗಿಲ್ಲದ ಸ್ಥಿತಿ ಕಾಣಲು ದೊರೆಯಿತು ಇಂತಹಾ ಅನೇಕ ಉದಾಹರಣೆಗಳಿವೆ ಆದರೆ ಎಲ್ಲಾ ತಾಲೂಕಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡು ತನ್ನ ಹಿಡಿತವನ್ನು ಸಾಧಿಸಿ ಖಾನಾಪೂರ ತಾಲೂಕಿನ ಜನತೆಗೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪೂರಕವಾಗಿ ಅನುಷ್ಠಾನ ಮಾಡಬೇಕು ಆದರೆ ಇಂತಹಾ ಯಾವುದೇ ರೀತಿಯ ವ್ಯವಸ್ಥೆ ನಡೆಯದೇ ಕೇವಲ ಕಾಟಾಚಾರಕ್ಕೆ ಎಂಬಂತೆ ಸಭೆಗಳು ನಡೆಸಿ ಹೋಗುತ್ತಿರುವುದು ಮೇಲನ್ನೋಟಕ್ಕೆ ಕಾಣಲು ದೊರೆಯುತ್ತಿದೆ ಇನ್ನೂ ಕೆಲವು ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಲ ಇನ್ನೂ ಕೆಲವರಿಗೆ ಗೃಹ ಲಕ್ಷ್ಮೀ ಯೋಜನೆ ತಲುಪಿಲ್ಲ ಬಂದು ಸ್ಥಗಿತಗೊಂಡಿದೆ ಇಂತಹಾ ಅನೇಕ ಸಮಸ್ಯೆಗಳಿವೆ ಅನ್ನಭಾಗ್ಯ ಯೋಜನೆಯ ಯಾವುದೇ ಅಧಿಕಾರಿಗಳು ಸಭೆಗೆ ಹಾಜರಾಗಿಲ್ಲದ ಮೇಲೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕು, ಕೆಲವು ಬಸ್ ಗಳು ಬಸ್ ನಿಲ್ದಾಣ ಬಿಟ್ಟು ಬೇರೆ ಕಡೆಗೆ ನಿಲುಗಡೆ ಮಾಡಿದೆ ಹೀಗೆ, ಹಾಗೆ ಅಂತ ಸುಮಾರು ಸಮಸ್ಯೆಗಳಿವೆ ಆದರೆ ಇದನ್ನು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಅಧಿಕಾರಿಗಳಿಂದ ಮಾಡಿಸಿಕೊಳ್ಳುವಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅವರು ವಿಫಲವಾಗಿರುವುದು ಮೆನ್ನೋಟಕ್ಕೆ ಎಂದು ಕಾಣುತ್ತಿದೆ

Tags:

error: Content is protected !!