KHANAPUR

ನಿಲ್ಲದ ಖಾನಾಪೂರ ಬ್ಲಾಕ್ ಕಾಂಗ್ರೆಸ್ ವರಸಫ್ ವಾರ್

Share

ಹೌದು ವಿಧಾನಸಭೆ 2023 ರ ಬಿಜೆಪಿಯವರ ಚುನಾವಣಾ ಪ್ರಚಾರ
“ನಾವು ಶಾಸಕರಾದ ಮೇಲೆ ಎಂಟ್ರಿ ಕೊಡದೆ ಮರಳು ಸಾಗಾಟವನ್ನು ಆರಂಭಿಸುತ್ತೇವೆ” ಎಂದು ಆರಂಭವಾದ ಪ್ರಯಾಣ, ಇಂದು ಎಂಟ್ರಿ ಇದ್ದರೂ ಲಾರಿಗಳು ವಶಪಡಿಸಿಕೊಳ್ಳಲ್ಪಡುವ ಹಂತಕ್ಕೆ ಬಂದು ನಿಂತಿದೆ… ದುಃಖದ ಸಂಗತಿ.
ಸುಳ್ಳಿನ ಪರಮಾವಧಿ ತಲುಪಿದೆ.

ಹೌದು ನಿನ್ನೆ ದಿನ 4–5 ಮರಳು ಲಾರಿಗಳನ್ನು ಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ಎಂಟ್ರಿ ಇದ್ದರೂ ಲಾರಿಗಳನ್ನು ಪೊಲೀಸರು ಹಿಡಿದರು ಎಂದು ಮರಳು ವ್ಯಾಪಾರಿಗಳು ಹೇಳುತ್ತಿದ್ದರು.
ತುಂಬಾ ದುಃಖಕರ. ಬಿಜೆಪಿ ನಾಯಕರು ಮೌನವಾಗಿದ್ದಾರೆ ಯಾಕೆ ಎಂದೂ ಗೊತ್ತಾಗುತ್ತಿಲ್ಲ.!

ಖಾನಾಪುರ ಪೊಲೀಸರ ಶೌರ್ಯ ಹೇಗಿದೆ ಎಂದರೆ ಲಾರಿಗಳನ್ನು ವಶಪಡಿಸಿಕೊಂಡ ಬಳಿಕ ಮೈನ್ಸ್ ಅಂಡ್ ಜಿಯಾಲಜಿ ಇಲಾಖೆಗೆ ಪತ್ರ ಕಳುಹಿಸಿದ್ದಾರೆ. ಅದರಲ್ಲಿ 3 ಬ್ರಾಸ್ ಮರಳಿನ ಬದಲು 1.5 ಬ್ರಾಸ್ ಮಾತ್ರ ಇದೆ ಎಂದು ಬರೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವೋ ಸುಳ್ಳೋ ದೇವರಿಗೇ ಗೊತ್ತು. ಖಚಿತ ಮಾಹಿತಿ ಇಲ್ಲ
ಅಂದರೆ ಮತ್ತೆ ಖಾನಾಪೂರ ಪೊಲೀಸರು ಅಕ್ರಮ ಮಾಡಿದ್ದಾರಾ???
ಅಕ್ರಮ ಮಾಡಬೇಕೇ ಇದ್ದರೆ ಲಾರಿಗಳನ್ನು ಏಕೆ ಹಿಡಿದರು?
ಯಾರು ಹೇಳಿದರು ಲಾರಿಗಳನ್ನು ಹಿಡಿಯಿರಿ ಎಂದು???

ಅಂದರೆ ಕ್ರಮ ಕೈಗೊಂಡಂತೆ ತೋರಿಸಿ, ನಂತರ 3 ಬ್ರಾಸ್ ಬದಲು 1.5 ಬ್ರಾಸ್ ಮರಳು ಇದೆ ಎಂದು ಮೈನ್ಸ್ ಅಂಡ್ ಜಿಯಾಲಜಿಗೆ ಪತ್ರ ಕೊಡುವುದು, ಎಷ್ಟೊಂದು ಅಕ್ರಮ!
ಮೊದಲ ಅಕ್ರಮವಾಗಿ ಎಂಟ್ರಿಯ ಲಾರಿಗಳನ್ನು ಹಿಡಿದದ್ದು?
ಎರಡನೇಯದು ಅಕ್ರಮ – 3 ಬ್ರಾಸ್ ಬದಲು 1.5 ಬ್ರಾಸ್ ಇದೆ ಎಂದು ಹೇಳಿದ್ದು??

ಮೊನ್ನೆ ದಿನ ಕುಸುಮಳಿ ಗ್ರಾಮದ ಜಗಳ ನಡೆದಿದೆ ಮಗ ಮತ್ತು ತಾಯಿಗೆ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಮತ್ತು ಕೊನೆಯಲ್ಲಿ ರಾಜಿ ಮಾಡಿಕೊಂಡಿರಬಹುದು?
ನಂತರ ಪೊಲೀಸರು “ದೂರು ಬಂದಿಲ್ಲ” ಎಂದು ಹೇಳ ತೊಡಗಿದರು ಆದರೆ ಸಾರ್ವಜನಿಕರು ಹೇಳುವದೇನೆಂದರೆ – ಪೊಲೀಸರು ದೂರು ದಾಖಲಿಸಿಕೊಳ್ಳುವುದೇ ಇಲ್ಲ ಎಂದು.
ವಿಚಿತ್ರ ಆಡಳಿತ ಸ್ವಾಮಿ..

ಸುಮಾರು 15 ದಿನಗಳ ಹಿಂದೆ ಗೋವಾಕ್ಕೆ ಸೇರಿದ ಒಂದು ಹೊಸ ಟ್ರಕಗೆ ಹಾನಿ ಮಾಡಿ ಚಾಲಕನಿಗೆ ರಾಡ್‌ನಿಂದ ಹೊಡೆದಿದ್ದಾರೆ. ಕೇವಲ ಸಣ್ಣ ಕೇಸ್ ಮಾಡಿ ಸ್ಟೇಷನ್ ಜಾಮೀನಿನಲ್ಲಿ ಆರೋಪಿಗಳನ್ನು ಬಿಡಲಾಗಿದೆ. ಆ ವಾಹನ ಮಾಲೀಕರು ಹೇಳಿದರು – “ನಾನು ದಿನವಿಡೀ ಕಾಯುತ್ತಿದ್ದರು ಸಹ ನನಗೆ ಆದರೆ FIR ಪ್ರತಿಯನ್ನೂ ಕೊಡಲಿಲ್ಲ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.”
ಇದೆಲ್ಲವನ್ನೂ ನೋಡಿದರೆ ವಿಚಿತ್ರ ಆಡಳಿತ ವೆನಿಸುವುದಿಲ್ಲವೇ.!
ಎಲ್ಲವೂ ರಾಜಿ ಮಾತ್ರ…!

“ನಾವು ಶಾಸಕರಾದ ಮೇಲೆ ಕಾರ್ಯಕರ್ತರಿಗೆ ಕೆಲಸ ಸಿಗುತ್ತದೆ” ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಈಗ ಕೆಲಸಗಳು ನಿರ್ಮಿತಿ ಕೇಂದ್ರ ಮತ್ತು ಲ್ಯಾಂಡ್ ಆರ್ಮಿಗೆ ನೀಡಲಾಗುತ್ತಿವೆ.
ಸ್ವತಃ ಬಿಜೆಪಿಯ ಗುತ್ತಿಗೆದಾರರಿಗೆ ಕೆಲಸ ಇಲ್ಲ?
ಇವಾಗ ತಾಲ್ಲೂಕಿನ ಗುತ್ತಿಗೆದಾರರು ಮೌನವಾಗಿರುವುದೇಕೆ?
ಇವಾಗ ಉಪವಾಸ ಸತ್ಯಾಗ್ರಹಗಳಿಲ್ಲ, ಪ್ರತಿಭಟನೆಗಳಿಲ್ಲ… ಯಾಕೆ.?
ಗುತ್ತಿಗೆದಾರರು ಕಂಗೆಟ್ಟಿದ್ದಾರೆ.
ಆದರೆ ಜನಪ್ರತಿನಿಧಿಗಳು ಮತ್ತು ಬಿಜೆಪಿ ನಾಯಕರು ಮಸ್ತ ಮಜಾ ಮೂಡನಲ್ಲಿದ್ದಾರೆ?

ಬಡವರು, ಸಾಮಾನ್ಯ ಜನತೆ, ಕಾರ್ಮಿಕರು, ರೈತರು, ಮರಳು ವ್ಯಾಪಾರಿಗಳು, ಗುತ್ತಿಗೆದಾರರು—ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಜನಪ್ರತಿನಿಧಿಗಳು ಹಾಗೂ ಸಮಸ್ತ ಬಿಜೆಪಿ ನಾಯಕರು ಮೋಜಿನಲ್ಲಿದ್ದಾರೆ.ಹೀಗೆ ಆಯಿತು,ಹಾಗೆ ಆಯಿತು ಎಂದು ಖಾನಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಖಾನಾಪೂರ ಬಿಜೆಪಿ ಮತ್ತು ಖಾನಾಪೂರ ಪೋಲಿಸ್ ಠಾಣೆಯ ವಿರುದ್ಧ ಆರೋಪಗಳ ಸುರಿಮಳೆಯೇ ಸಾರುತ್ತಿರುವ ಪಟ್ಟಿ ವರಸಫ್ ಗ್ರುಪ್ ನಲ್ಲಿ ಸಂಚರಿಸಿ ಖಾನಾಪೂರ ತಾಲೂಕಿನ ಜನತೆಯಲ್ಲಿ ಒಂದು ಪ್ರಶ್ನೆ ಉದ್ಭವಿಸಿದ್ದು ಈ ಪ್ರಶ್ನೆಗಳಿಗೆ ಜನಸಾಮಾನ್ಯರಿಗೆ ನ್ಯಾಯ ಮತ್ತು ಸಮಾನತೆಯ ಸಿಗುವ ಅಂಶವನ್ನು ಖಾನಾಪೂರ ಬಿಜೆಪಿ ಮತ್ತು ಖಾನಾಪೂರ ಪೋಲಿಸ್ ಠಾಣೆಯ ಅಧಿಕಾರಿಗಳು ಮಾಡುವವರೇ ಎಂದು ಖಾನಾಪೂರ ತಾಲೂಕಿನ ಜನತೆಯ ಲಕ್ಷ ಕೇಂದ್ರಿಕೃತವಾಗಿದೆ ಒಟ್ಟಿನಲ್ಲಿ ಖಾನಾಪೂರ ಬ್ಲಾಕ್ ಕಾಂಗ್ರೆಸ್ ದಿನಕ್ಕೊಂದು ವರಸಫ್ ವಾರ್ ಪ್ರಾರಂಭಿಸಿದೆ.

Tags:

error: Content is protected !!