Belagavi

ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಸಂಪೂರ್ಣವಾಗಿ ಬಂದ್ ಮಾಡುವ ಹುನ್ನಾರ ಮಾಡಿದೆ. ಬೆಳಗಾವಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ನರೇಗಾ ಕೂಲಿ ಕಾರ್ಮಿಕರ ಬೃಹತ್ ಪ್ರತಿಭಟನೆ

Share

ಭಾರತದ ಗ್ರಾಮೀಣ ಜೀವನಾಡಿ ನರೇಗಾ ವಿಬಿ-ಜಿ ರಾಮ್ ಜಿ ಮಸೂದೆ ತಿದ್ದುಪಡಿಯನ್ನು ಕೇಂದ್ರ ಸರಕಾರ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ಇಂದು SUCI AIKKMS ಸಂಘಟನೆಯ ಕಾರ್ಯಕರ್ತರು ಅಂಬೇಡ್ಕರ್ ಉದ್ಯಾನವನದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರಕಾರ ಗ್ರಾಮೀಣ ಭಾಗದ ಜನರ ಉದ್ಯೋಗ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ. ಈ ಮಸೂದೆಯನ್ನು ಜಾರಿಗೆ ತಂದು, ಸಂಯುಕ್ತ ರಾಷ್ಟ್ರದ ವ್ಯವಸ್ಥೆಯ ಪರಿಕಲ್ಪನೆಯನ್ನು ಬದಲಾಯಿಸಿ, ಯೋಜನೆ ರದ್ದು ಮಾಡುವ ಹಾಗೂ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ತಂತ್ರಗಾರಿಕೆ. ಮತ್ತೆ ಮೊದಲಿನಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಎಂದು ಮರುನಾಮಕರಣ ಮಾಡುವುದು, ವಿಕಸಿತ ಗ್ರಾಮೀಣ ಭಾರತದ ಬಡ, ಕೃಷಿ ಕಾರ್ಮಿಕರ ಉದ್ಯೋಗ ಮತ್ತು ವೇತನ ಹೆಚ್ಚಿಸಿ, ಭದ್ರತೆ ಒದಗಿಸುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ರಾಜು ಗುನಗಿ, ಆಶಾ ರೆಡ್ಡರ್, ಅಂಜಲಿ ಜೋಪಡಪಟ್ಟಿ, ಕಲ್ಲಪ್ಪ ರಾಮಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!