ಬಾಂಗ್ಲಾದೇಶದಲ್ಲಿ ಹಿಂದೂಗಳು ನರಿ ನಾಯಿ ಸ್ಥಿತಿಯಲ್ಲಿರುವುದು ಈ ಕೇಂದ್ರ ಸರ್ಕಾರಕ್ಕೆ ಯಾಕೆ ಕಾಣುತ್ತಿಲ್ಲ. ಕೂಡಲೇ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.

ಧಾರವಾಡದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಈ ಕುರಿತು ಗಂಭೀರವಾಗಿ ಪರಿಗಣಿಸಿ ಅಮಾಯಕ ಹಿಂದೂಗಳ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಬೇಕು. ನಮ್ಮಿಂದಲೇ ಹುಟ್ಟಿ ನಮ್ಮಂದಲ್ಲೇ ಬದುಕುತ್ತಿರುವ ಬಾಂಗ್ಲಾ ಈಗ ನಮ್ಮ ಹಿಂದೂಗಳ ಮೇಲೆ ಅಟಹಾಸ ತೋರುತ್ತಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಬಾಂಗ್ಲಾದೇಶ ವಿಫಲವಾಗಿದೆ. ಹಿಂದೂ ಕುಟುಂಬದ ಮನೆಗಳಿಗೆ ಬೆಂಕಿ ಹಚ್ಚುತ್ತಿರುವ ಮತಾಂಧರ ಗುಂಪುಗಳ ಹುಟ್ಟು ಅಡಗಿಸಬೇಕು ಎಂದು ಆಗ್ರಹಿಸಿದರು.
