Chikkodi

ಚಿಕ್ಕೋಡಿ ಜಿಲ್ಲೆ ಮಾಡಿದಲ್ಲಿ ಅಂಬೇಡ್ಕರ್ ಎಂದು ಹೆಸರಿಡಿ: ಅಂಬೇಡ್ಕರ ಜನ ಜಾಗೃತಿ ಸೇವಾ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ

Share

ಬೆಳಗಾವಿ ಜಿಲ್ಲೆ ವಿಭಜಿಸಿ ನೂತನ ಜಿಲ್ಲೆಯನ್ನಾಗಿ ಮಾಡಿದಲ್ಲಿ ಚಿಕ್ಕೋಡಿಗೆ ಬಾಬಾಸಾಹೇಬ ಅಂಬೇಡ್ಕರ ಜಿಲ್ಲೆಯನ್ನಾಗಿ ನಾಮಕರಣ ಮಾಡುವಂತೆ ಒತ್ತಾಯಿಸಿ ಡಾ.ಬಿ. ಆರ್. ಅಂಬೇಡ್ಕರ ಜನ ಜಾಗೃತಿ ಸೇವಾ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಚಿಕ್ಕೋಡಿ ನೆಲದಲ್ಲಿ ಡಾ. ಬಿ. ಆರ್.ಅಂಬೇಡ್ಕರ ಅವರು ನಡೆದಾಡಿರುವ ಇತಿಹಾಸವಿದೆ. ಅವರ ಹೆಸರು ನಾಮಕರಣ ಮಾಡಿದಲ್ಲಿ ಕಾಂಗ್ರೆಸ್ ಸರಕಾರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದರು.

ಚಿಕ್ಕೋಡಿ ಜಿಲ್ಲೆಗಾಗಿ ದಲಿತಪರ ಸಂಘಟನೆಗಳು ನಿರಂತರವಾಗಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿವೆ. ಅಲ್ಲದೆ ಈಗಾಗಲೇ ಉತ್ತರಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಜಿಲ್ಲೆಯನ್ನಾಗಿ ಮಾಡಲಾಗಿದೆ.ಸರಕಾರ ಅಂಬೇಡ್ಕರ ಅವರ ಬಗ್ಗೆ ಗೌರವವಿದ್ದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿಸಿ ಅಂಬೇಡ್ಕರ ಅವರ ಹೆಸರು ಇಡಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ ಅವರ ಹೆಸರು ಇಡದೆ ಹೋದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಸಂಘದ ಅಧ್ಯಕ್ಷ ರಾವಸಾಬ ಫಕೀರೆ, ಕಾರ್ಯದರ್ಶಿ ಸುದರ್ಶನ ತಮ್ಮಣ್ಣವರ, ಖಜಾಂಚಿ ಮಹಾದೇವ ಮುನ್ನೋಳಿಕರ, ನಿರಂಜನ ಕಾಂಬಳೆ, ನಂದಕುಮಾರ ದರಬಾರೆ, ಮಾರುತಿ ಕಾಂಬಳೆ, ಮನೋಹರ ಬಾಳನಾಯಿಕ, ಸುರೇಶ ತಳವಾರ, ಮಾಳಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!