ಲಿಂಗಾಯತ ಸ್ವಾಮೀಜಿಗಳಿಗೆ ಅವಾಚ್ಯ ಶಬ್ಧಗಳಲ್ಲಿ ನಿಂದಿಸಿದರು ಎನ್ನುವ ಕಾರಣಕ್ಕೆ ಕನ್ನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ ನಿರ್ಬಂಧ ತೆರವಾಗಿದ್ದು, ಭಕ್ತರು ಕನ್ನೇರಿ ಶ್ರೀಗಳನ್ನ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ವಿಶೇಷ ಎಂದರೆ ಸಚಿವ ಎಂ ಬಿ ಪಾಟೀಲ್ ಕ್ಷೇತ್ರದ ಮೂಲಕವೇ ಕನ್ನೇರಿ ಶ್ರೀ ಎಂಟ್ರಿ ಹೊಡೆದಿದ್ದಾರೆ.

ಕೆಲ ತಿಂಗಳ ಹಿಂದೆ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ಮಾತನಾಡುವ ಭರದಲ್ಲಿ ಕೊಲ್ಲಾಪುರದ ಕನ್ನೇರಿ ಶ್ರೀಗಳು ಲಿಂಗಾಯತ ಶ್ರೀಗಳ ಕುರಿತು ಆಡಿದ ಕೆಲ ಮಾತುಗಳು ಭಾರೀ ವಿವಾದ ಸೃಷ್ಠಿ ಮಾಡಿತ್ತು. ಬಳಿಕ ಸಪ್ಟೆಂಬರ್ 16 ರಂದು ವಿಜಯಪುರ ಜಿಲ್ಲಾಡಳಿತ ಕನ್ನೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಕಳೆದ ಡಿಸೆಂಬರ್ 14 ರಂದು ಕನ್ನೇರಿ ಶ್ರೀಗಳ ನಿರ್ಬಂಧ ಅವಧಿ ಮುಗಿದಿತ್ತು. ಇದರ ಬೆನ್ನಲ್ಲೆ ಈಗ ಭಕ್ತರು ಅದ್ದೂರಿಯಾಗಿ ಕನ್ನೇರಿ ಶ್ರೀಗಳನ್ನ ವಿಜಯಪುರ ಜಿಲ್ಲೆಗೆ ಸ್ವಾಗತ ಮಾಡಿಕೊಂಡಿದ್ದಾರೆ. ಸಚಿವ ಎಂ ಬಿ ಪಾಟೀಲ್ ಮತಕ್ಷೇತ್ರ ಬಬಲೇಶ್ವರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶದ ಮೂಲಕ ಶ್ರೀಗಳನ್ನ ವಿಜಯಪುರ ಜಿಲ್ಲೆಗೆ ಭಕ್ತಬಳಗ ಸ್ವಾಗತಿಸಿಕೊಂಡಿದೆ. ಕನ್ನೇರಿ ಶ್ರೀಗಳು ಜಿಲ್ಲಾ ಪ್ರವೇಶ ಮಾಡುತ್ತಿದ್ದಂತೆ ಭಕ್ತರು ಶ್ರೀಗಳ ಮೇಲೆ ಹೂಮಳೆಗರೆದು ಸ್ವಾಗತಿಸಿಕೊಂಡರು. ಈ ವೇಳೆ ಮಾತನಾಡಿದ ಕನ್ನೇರಿ ಶ್ರೀಗಳು ರಾಜಕೀಯ ಒತ್ತಡದಿಂದ ನನ್ನನ್ನ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಆದ್ರೆ ಇಂದು ಜನರೇ ಅಂತವರಿಗೆ ತಿರುಗೇಟು ಕೊಟ್ಟಿದ್ದಾರೆ ಎಂದರು…
ಬಳಿಕ ನಡೆದ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ ನೂರಾರು ಜನ ಮಠಾಧೀಶರು, ಸ್ವಾಮೀಜಿಗಳು, ಮಾತಾಜಿಗಳು ಭಾಗಿಯಾಗಿದ್ದರು. ಶಂಖನಾದದ ಜೊತೆಗೆ ಮಡಿಕೆಗೆ ಕಾಳು ತುಂಬಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಮಾಜಿ ಡಿಸಿಎಂ ಈಶ್ವರಪ್ಪ, ಶಾಸಕಿ ಶಶಿಕಲಾ ಜೊಲ್ಲೆ ದಂಪತಿ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ಮಾತನಾಡಿ ಹಿಂದೂ ಸಂಪ್ರದಾಯದಲ್ಲಿ ತಾಯಿತಂದೆ ಗುರುಗಳಿಗೆ ದೇವರೆಂದು ಕರೆಯುತ್ತೇವೆ. ನಮ್ಮ ದೇವರು ಗಳಿಗೆ ಕಟ್ಟಿ ಮೂಲೆಯಲ್ಲಿ ಇಡಿ ಎನ್ನುವ ಸ್ವಾಮಿಜಿಗೆ ಎನೂ ಅನ್ನಬೇಕು. ದೇವರ ಬಗ್ಗೆ, ಸಾಧು ಸಂತರ ಬಗ್ಗೆ ಮಾತಾನಾಡಿದರೆ ಹುಷಾರ್ ಎಂಬ ಎಚ್ಚರಿಕೆ ಈ ಸಮಾವೇಶ ದ ಮೂಲಕ ಕೊಡುತ್ತೇವೆ ಎಂದರು. ಹಿಂದೂ ಧರ್ಮದ ಬಗ್ಗೆ ಮಾತನಾಡಿದವರಿಗೆ ಎಚ್ಚರಿಕೆ ಕೊಟ್ಟರೆ ಅವರಿಗೆ ನಿಷೇಧ ಮಾಡುತ್ತೀರಾ, ಮುಂಬರುವ ದಿನದಲ್ಲಿ ಬಬಲೇಶ್ವರ ಮತಕ್ಷೇತ್ರದ ಜನರು ಸಹಿತ ನಿಮ್ಮದು ನಿಷೇಧ ಹೇರುತ್ತಾರೆ ಇದು ಅಪರೋಕ್ಷವಾಗಿ ಎಂ ಬಿ ಪಾಟೀಲ ಅವರಿಗೆ ಹೇಳಿದರು…
ಇನ್ನು ಸಮಾವೇಶದಲ್ಲಿ ಭಾಗಿಯಾಗಿದ್ದ ಶ್ರೀಗಳು ಕನ್ನೇರಿ ಶ್ರೀ ನಿರ್ಬಂಧ ಮಾಡಿದ್ದರ ಹಿಂದೆ ರಾಜಕೀಯ ಇದೆ ಎಂದು ಆಕ್ರೋಶ ಹೊರಹಾಕಿದ್ರು. ಇನ್ನೂ ಬ್ಯಾನ್ ಹಿನ್ನೆಲೆ 2 ತಿಂಗಳಿನಿಂದ ಕನ್ನೇರಿ ಶ್ರೀಗಳ ದರ್ಶನಕ್ಕಾಗಿ ಹಂಬಲಿಸುತ್ತಿದ್ದ ಜಿಲ್ಲೆಯ ಸಾವಿರಾರು ಭಕ್ತರು ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದು ಸಂತೃಪ್ತರಾಗಿದ್ದಂತು ನಿಜ…
