Chikkodi

ಬೀದಿನಾಯಿ ದಾಳಿಗೆ 15 ಕುರಿ-ಮೇಕೆಗಳ ದಾರುಣ ಸಾವು…!

Share

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಹೊರವಲಯದ ಕುರುಬರ ದೊಡ್ಡಿಯಲ್ಲಿ ಬೀದಿ ನಾಯಿಗಳ ದಾಳಿಗೆ ಕುರಿಗಾಹಿ ರಾಮಾ ಮಹಿಪತಿ ಅವರಿಗೆ ಸೇರಿದ 15 ಕುರಿ ಹಾಗೂ ಮೇಕೆಗಳು ಸಾವನ್ನಪ್ಪಿದ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ತಾಲೂಕು ಪಶು ಸಂಗೋಪನಾಧಿಕಾರಿ ಡಾಕ್ಟರ್ ಟೋಪಣ್ಣ ಘಂಟೆ ಭೇಟಿ ನೀಡಿ ಸರ್ಕಾರದಿಂದ ಶೀಘ್ರ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕುರಿಗಾಹಿ ರಾಮಾ ಮಹಿಪತಿ ಬಡ ಕುಟುಂಬದವನಾಗಿದ್ದು ಅವುಗಳ ಮೇಲೆಯೇ ನಮ್ಮ ಜೀವನ ನಮಗೆ ಹೊಲ ಇಲ್ಲ ಮನೆ ಇಲ್ಲ ಎಂದು ಗೋಳಾಡಿದ ಕುಟುಂಬಸ್ಥರು. ಅದಕ್ಕೆ ಪರಿಹಾರ ಒದಗಿಸುವಂತೆ ಕುರಿಗಾರರು ಒತ್ತಾಯಿಸುವುದರ ಜೊತೆಗೆ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಪುರಸಭೆಯವರು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸದಲಗಾ ನಗರದ ಜೊತೆಗೆ ತೋಟಪಟ್ಟಿ ಪರಿಸರದಲ್ಲೂ ಬೀದಿನಾಯಿಗಳು ಹೆಚ್ಚಾಗಿದ್ದು ರಾತ್ರಿ ವೇಳೆಯಲ್ಲಿ ಹೊಲಗದ್ದೆಗಳಿಗೂ ತೆರಳಲು ಭಯವಾಗುತ್ತದೆ. ಮುಂಜಾನೆ ವಾಯುವಿಹಾರಕ್ಕೂ ಹೋಗಲು ಭಯವಾಗುತ್ತದೆ. ಮಕ್ಕಳು ಮತ್ತು ಹಿರಿಯರು ಒಬ್ಬರೆ ತಿರುಗಾಡುವುದಕ್ಕೆ ಹೆದರಿಕೆ ಬರುತ್ತಿದ್ದು ಪುರಸಭೆಯವರು ಬೀದಿ ನಾಯಿಗಳ ಕಾಟ ತಪ್ಪಿಸಲು ತಜ್ಞರನ್ನು ಕರೆದು ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.

Tags:

error: Content is protected !!