ಇತ್ತೀಚಿನ ದಿನಗಳಲ್ಲಿ ಖದೀಮ ಕಳ್ಳರು ಚಿನ್ನಾಭರಣ ಅಂಗಡಿಗಳುಗೆ ಕನ್ನಾ ಹಾಕುತ್ತಿರುವ ಪ್ರಕರಣಗಳು ಹೆಚ್ಚಾದ ಹಿನ್ನಲೆ ಹಾಗೂ ಮುಂಜಾಗ್ರತಾ ಕ್ರಮವಾಗಿ, ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಅಂಗಡಿ ಮಾಲೀಕರ ಸಭೆ ನಡೆಸಿ ಎಸಿಪಿಯವರು ಅಂಗಡಿ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಧಾರವಾಡ ಶಹರ ಪಟಕ ಠಾಣೆಯ ಸಭಾ ಭವನದಲ್ಲಿ ಚಿನ್ನಾಭರಣ ಅಂಗಡಿ ಮಾಲೀಕರ ಸಭೆ ನಡೆಸಿ, ಅಂಗಡಿಳ ಭದ್ರತೆ ಕುರಿತು ಠಾಣೆಯ ಎಸಿಪಿ ಅಲಿ ಶೇಕ್, ಪಿಎಸ್ಐ ವಿನೋದ ಸೇರಿ ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರವರು ಕಾನೂನಿನ ಪಾಠ ಮಾಡುವುದರ ಜತೆಗೆ ಅಂಗಡಿಗಳ ಭದ್ರತೆ ಕುರಿತು ಮಾಲೀಕರಿಗೆ ತಿಳುವಳಿಕೆ ನೀಡಿದರು. ಜತೆಗೆ ಯಾವ ಯಾವ ಅಂಗಡಿ ಮಾಲೀಕರು ಸಿಸಿಟಿವಿಗಳನ್ನು ಅಳವಡಿಸಿಕೊಂಡಿದ್ದಾರೆ. ಸಿಸಿಟಿವಿ ಅಳವಡಿಸಿಕೊಳ್ಳದೇ ಇರುವ ಶಾಪ್’ಗಳ ಕುರಿತು ಅಂಗಡಿಕಾರರಿಂದ ಮಾಹಿತಿ ಪಡೆದುಕೊಂಡರು. ಅಲ್ಲದೆ ನಕಲಿ ಬಂಗಾರ ಮಾರಾಟ, ಕದ್ದ ಚಿನ್ನಾಭರಣ ಖರೀದಿ ಕುರಿತು ಎಚ್ಚರ ಇರುವಂತೆ ಹೇಳಿದರು. ಅಂಗಡಿ ಮಾಲೀಕರು ಸಿಸಿಟಿವಿ ಕಡ್ಡಾಯವಾಗಿ ಸೆಕ್ಯೂರಿಟಿ ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳಬೇಕು. ಸಿಸಿಟಿವಿ ಅಳವಡಿಸಿಕೊಳ್ಳದ ಅಂಗಡಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಸಿಪಿಯವರು ಖಡಕ್ ವಾರ್ನ್ ಮಾಡಿದರು. ಈ ವೇಳೆ ಧಾರವಾಡದ ಎಲ್ಲಾ ಬಂಗಾರ ಅಂಗಡಿ ಮಾಲೀಕರು ಮತ್ತು ಸಂಘದ ಸದಸ್ಯರು, ASI ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
