ಕಣಬರ್ಗಿ ರೈತರ ಸಹಮತಿ ಇಲ್ಲದಿದ್ದರೂ 60 ಎಕರೆ 18 ಗುಂಟೆ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಸ್ವಾಧೀನ ಪಡಿಸಿಕೊಂಡಿದ್ದು, 7 ದಿನದೊಳಗೆ ಮರಳಿ ರೈತರ ಹೆಸರಿಗೆ ಹಸ್ತಾಂತರಿಸದಿದ್ದರೇ ಗುರ್ಲಾಪುರ ಮಾದರಿಯಲ್ಲಿ ಹೋರಾಟ ನಡೆಸಲಾಗುವುದೆಂದು ಕಣಬರ್ಗಿಯ ರೈತರು ಎಚ್ಚರಿಕೆ ನೀಡಿದ್ದಾರೆ.


ಇಂದು ಈ ಕುರಿತಾದ ಮನವಿಯನ್ನು ಬುಡಾ ಆಯುಕ್ತರಿಗೆ ಸಲ್ಲಿಸಲಾಯಿತು. ಕಣಬರ್ಗಿ ಸ್ಕೀಂ ನಂ. 61 ರಲ್ಲಿರುವ 60 ಎಕರೆ 18 ಗುಂಟೆ ರೈತರ ಫಲವತ್ತಾದ ಭೂಮಿಯನ್ನು ಅಭಿವೃದ್ಧಿ ಹೆಸರಲ್ಲಿ ಬುಡಾ ಅಧಿಕಾರಿಗಳು, ರೈತರ ಸಹಮತಿ ಇಲ್ಲದೇ ಕಬ್ಜಾ ಪಡೆದಿದ್ದು, ರೈತನ ಹೆಸರು ತೆಗೆದು ಹಾಕಿ ಬುಡಾ ಹೆಸರನ್ನು ಉಲ್ಲೇಖಿಸಿದ್ದಾರೆ. ಸ್ಕೀಂ ನಂ.61 ರಲ್ಲಿ ಭೂಮಾಫಿಯಾದವರಿಗೆ ಎನ್.ಓ.ಸಿ ನೀಡಿ ಮನಬಂದಂತೆ ವರ್ತಿಸಿದ್ದಾರೆ. ಹಲವಾರು ರೈತರು ನ್ಯಾಯಾಲಯದ ಮೋರೆ ಹೋಗಿದ್ದಾರೆ. ಅದನ್ನು ಉಲ್ಲಂಘಿಸಿ, ಅವರ ಹೆಸರನ್ನು ಬದಲಾಯಿಸಲಾಗಿದೆ. ಭೂಸ್ವಾಧೀನ ಪಡಿಸಿಕೊಂಡಲ್ಲಿ ಸರಿಯಾದ ಪರಿಹಾರವನ್ನು ನೀಡುತ್ತಿಲ್ಲ. ಸಚಿವರುಗಳನ್ನು ಭೇಟಿಯಾದಾಗ ಬಂಜರು ಭೂಮಿ ಎಂದಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಾನೂನು ಪಾಲಿಸಿ, ರೈತರಿಗೆ ನ್ಯಾಯ ಒದಗಸಿಬೇಕು ಎಂದರು. ಮತ್ತೇ ರೈತರು ಗುರ್ಲಾಪೂರ ಹೋರಾಟ ಮರುಕಳಿಸದಂತೆ ಮಾಡಬಾರದು ಎಂದು ಪ್ರಕಾಶ್ ನಾಯಿಕ ಹೇಳಿದರು.
ಈ ಸಂದರ್ಭದಲ್ಲಿ ಸಂಜು ಇನಾಮದಾರ್, ಬಬನ ಮಾಲಾಯಿ, ಕೇದಾರಿ ಗೋವೇಕರ, ಕುಮಾರ್ ಪಾಟೀಲ್, ಅಲ್ತಾಬ್ ಮುಲ್ಲಾ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
