ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಅಥಣಿ ಡಿಪೋ ವ್ಯಾಪ್ತಿಗೆ ಸೇರಿದ ಅಥಣಿ–ಹಾರೋಗೇರಿ ಮಾರ್ಗದ ಬಸ್ನಲ್ಲಿ ಟಿಕೆಟ್ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಬಸ್ ನಿರ್ವಾಹಕನು ಪ್ರಯಾಣಿಕರಿಂದ ಹಣ ಪಡೆದುಕೊಂಡು ಟಿಕೆಟ್ ನೀಡದೆ ವಂಚನೆ ನಡೆಸಿದ್ದಾನೆ ಎನ್ನಲಾಗಿದೆ.
ಪ್ರಯಾಣದ ವೇಳೆ ಗಂಡಸರಿಂದಲೂ ಟಿಕೆಟ್ ಹಣ ಪಡೆದಿದ್ದರೂ ಟಿಕೆಟ್ ನೀಡದಿರುವುದನ್ನು ಗಮನಿಸಿದ ಸ್ಥಳೀಯರು ಬಸ್ ನಿರ್ವಾಹಕನನ್ನು ಪ್ರಶ್ನಿಸಿದ ಘಟನೆ ನಡೆದಿದೆ. ಬಸ್ ಸಾರಿಗೆ ವ್ಯವಸ್ಥೆಯಲ್ಲೇ ನೌಕರರಿಂದ ಇಂತಹ ವಂಚನೆ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಾರ್ವಜನಿಕ ಹಣದ ದುರುಪಯೋಗ ಹಾಗೂ ಪ್ರಯಾಣಿಕರ ನಂಬಿಕೆಗೆ ಧಕ್ಕೆ ತರುವ ಈ ಘಟನೆ ಕುರಿತು ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
