hubli

ಗೃಹ ಲಕ್ಷ್ಮೀ 5000 ಕೋಟಿ ಹಣ ಎಲ್ಲಿ ಹೋಯ್ತು; ಕೋಟ್ಯಾಂತರ ತಾಯಂದಿರ ಶಾಪ ತಟ್ಟುತ್ತೆ; ಶಾಸಕ ಟೆಂಗಿನಕಾಯಿ

Share

ಗೃಹಲಕ್ಷ್ಮಿ ಹಣ ಎರಡು ತಿಂಗಳು ಬಿಡುಗಡೆಯಾಗದ ವಿಚಾರ, ಕರ್ನಾಟಕ ಸರ್ಕಾರ ಗ್ಯಾರೆಂಟಿಯಲ್ಲಿ ಮೋಸ ಮಾಡ್ತಿದೆ.
ಅಧಿವೇಶನದಲ್ಲಿ ಗೃಹ ಲಕ್ಷ್ಮಿ ಯೋಜನೆ ಮಾತನಾಡಿದ್ದೆ,
ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಪ್ರಶ್ನೆ ಹಾಕಿದ್ದೆ, ಒಂದೊಂದು ಇಲಾಖೆ ಒಂದೊಂದು ಉತ್ತರ ಕೊಡ್ತಾ ಇದೆ. 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು ಕರ್ನಾಟಕದ ತಾಯಂದಿರ ಶಾಪ ತಟ್ಟುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೂರು ಜಿಲ್ಲೆಯ ಮಾಹಿತಿ ನಾನು ಕೊಟ್ಟಿದ್ದೆ ಫೆಬ್ರವರಿ, ಮಾರ್ಚ್ ಹಣ ಹಾಕಿಲ್ಲ ಅಂತ ಹೇಳಿದ್ದೆ, ಸಿಎಂ ಹಾಕಿಲ್ಲ ಅಂದ್ರೆ ಹಾಕ್ತೀವೆ ಅಂತ ಹೇಳಿದ್ರು.
ಸಚಿವರು ಉತ್ತರ ನೀಡಿದ್ರೂ, ತಪ್ಪು ಮಾಡಿದ್ವಿ ಅನ್ನೋ ಮಾತು ಬಂದಿದೆ
5 ಸಾವಿರ ಕೋಟಿ ಎಲ್ಲಿ ಹೋಯ್ತು
ಕ್ಷಮೆ ಕೇಳಿದ್ರೆ ಅಷ್ಟೇ ಇದು ಮುಗಿಯೋದಿಲ್ಲ, ಸುಮಾರು 20 ದಿನ ಕಳೆದರು ಆ ದುಡ್ಡು ಬಂದಿಲ್ಲ,
ಬೈರೇಗೌಡ ಸೆಕೆಂಡ್ ಸಪ್ಲಿಮೆಂಟ್ರಿ ಬಜೆಟ್ ಮಂಡನೆ ಮಾಡಿದ್ರು, ಅದರಲ್ಲಿ ಗ್ಯಾರೆಂಟಿ ಹಣ ಆಡ್ ಮಾಡಿ ಅಂತ ಹೇಳಿದ್ವಿ, 1 ಕೋಟಿ 24 ಲಕ್ಷ ತಾಯಂದಿರಿಗೆ ಹೋಗಿಲ್ಲ
ಯಾವುದೇ ರೀತಿ ಮಾಹಿತಿ ಕೊಡಬಾರದು ಅಂತ ಸೂಚನೆ ಹೋಗಿದೆ ಎಂದರು. ಕೂಡಲೇ ಎಲ್ಲ ಹಣವನ್ನು ಹಾಕಬೇಕು ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡುತ್ತೆವೆ ಎಂದು ಎಚ್ಚರಿಕೆ ಕೊಟ್ಟರು.

Tags:

error: Content is protected !!