ಗ್ರಾಮ ಭಾರತದ ಜೀವನಾಡಿ ನರೇಗಾ ತಿದ್ದುಪಡಿ ಮಾಡಿ ವಿಬಿ-ಜಿ ರಾಮ್ ಜಿ ಮಸೂದೆಯನ್ನು ಜಾರಿಗೆ ತರದಂತೆ ಕೇಂದ್ರ ಸರ್ಕಾರದ ವಿರುದ್ಧ ಆಗ್ರಹಿಸಿ ಸೋಮವಾರ ಭಾರತೀಯ ಕೃಷಿಕ ಸಮಾಜ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರಕಾರ ಚಳಿಗಾಲದ ಅಧಿವೇಶನದಲ್ಲಿ ಜಾರಿಗೆ ತಂದ ” ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ” ತಿದ್ದುಪಡಿ ಮಸೂದೆಯನ್ನು ಭಾರತೀಯ ಕೃಷಿಕ ಸಮಾಜ ( ಸಂಯುಕ್ತ)-ರೈತ ಸಂಘಟನೆ ಹಾಗೂ ನರೇಗಾ ಸಹಭಾಗಿತ್ವ ಸಂಘಟನೆ ವಿರೋಧಿಸಿದೆ. ಅಲ್ಲದೆ ಬದಲಾವಣೆಗಳ ಹೆಸರಿನಲ್ಲಿ ಗ್ರಾಮೀಣ ಭಾರತದ ಕನಸಿನ ಯೋಜನೆಯನ್ನು ಸಂಕೀರ್ಣಗೊಳಿಸುವ ಹುನ್ನಾರವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ದೂರಿದ್ದಾರೆ.
ಗ್ರಾಮೀಣ ಬಡ, ಮಾಧ್ಯಮ ಹಾಗೂ ಕೃಷಿ ಕಾರ್ಮಿಕರಿಗೆ ವರದಾನವಾಗಿದ್ದ ಮಹತ್ವ ಯೋಜನೆಯನ್ನು ಮಹಾತ್ಮಾ ಗಾಂಧೀ ಹೆಸರನ್ನು ಬದಲಿಸಿ, ಬದಲಿ “ವಿಬಿ ಜಿ ರಾಮ್ ಜಿ” ಎಂದು ಚಳಿಗಾಲ ಅಧಿವೇಶನದಲ್ಲಿ ತಿದ್ದುಪಡಿ ತಂದಿದ್ದು ಅತ್ಯಂತ ಖೇದಕರ ಸಂಗತಿಯಷ್ಟೆ ಅಲ್ಲ, ಗ್ರಾಮೀಣ ಭಾರತದ ಕಲ್ಪನೆಯನ್ನು ಬದಲಾಯಿಸಿ, ಉದ್ಯೋಗ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ. ಈ ಮಸೂದೆಯನ್ನು ಜಾರಿಗೆ ತಂದು, ಸಂಯುಕ್ತ ರಾಷ್ಟ್ರದ ವ್ಯವಸ್ಥೆಯ ಪರಿಕಲ್ಪನೆಯನ್ನು ಬದಲಾಯಿಸಿ, ಯೋಜನೆ ರದ್ದು ಮಾಡುವ ಹಾಗೂ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ತಂತ್ರಗಾರಿಕೆ. ಮತ್ತೆ ಮೊದಲಿನಂತೆ “ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ” ಎಂದು ಮರುನಾಮಕರಣ ಮಾಡುವುದು, ವಿಕಸಿತ ಗ್ರಾಮೀಣ ಭಾರತದ ಬಡ, ಕೃಷಿ ಕಾರ್ಮಿಕರ ಉದ್ಯೋಗ ಮತ್ತು ವೇತನ ಹೆಚ್ಚಿಸಿ, ಭದ್ರತೆ ಒದಗಿಸುವಂತೆ ಕೇಂದ್ರ ಸರಕಾರವನ್ನು ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಹೋರಾಟಗಾರರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
