ಬೆಳಗಾವಿ ತಾಲೂಕಿನ ಸಿದ್ದೇಶ್ವರ ದೇವದ್ಥಾನದ ಪೂಜಾರಿಗಳು ಸೇರಿಕೊಂಡು ಜಾತಿ ನಿಂದನೆ ಮಾಡಿ ನನಗೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಚನ್ನಬಸು ಹಡಗಲಿ ಆರೋಪಿಸಿದ್ದಾರೆ.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಕತಿಯಲ್ಲಿರುವ ಸಿದ್ದೇಶ್ವರ ದೇವಸ್ಥಾನದ ಪೂಜಾರಿಗಳು ನನ್ನ ಜಾತಿಯ ಮೇಲೆ ನಿಂದನೆ ಮಾಡಿದ್ದಲ್ಲದೆ ನಾಲ್ಕಾರು ಜನ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ದೇವಸ್ಥಾನದಲ್ಲಿ ಸೇವೆ ಮಾಡುವ ನನಗೆ ನಿತ್ಯ ಬೈಯುವುದು, ಹೊಡೆಯುವುದನ್ನು ಮಾಡುತ್ತಿದ್ದಾರೆ ಎಂದರು.
ನನಗೆ ಈಗ ಜೀವ ಭಯ ಹಾಕುತ್ತಿದ್ದಾರೆ. ಈಗಾಗಲೇ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ. ನ್ಯಾಯಕ್ಕಾಗಿ ನಗರ ಪೊಲೀಸ್ ಆಯುಕ್ತರಿಗೆ ದೂರು ಕೊಡುವುದಾಗಿ ಹೇಳಿದರು.
