Vijaypura

ಪತಿಯ ವಿರುದ್ದ ದೂರು ಕೊಟ್ಟ ಮಹಿಳೆಯನ್ನೆ ಪಠಾಯಿಸಿ ಪತಿಯ ವಿರುದ್ಧ ಕಿರಿಕಿರಿ‌ ಮಾಡಿದ ಪಿಎಸ್ಐ

Share

ದೂರು ನೀಡಲು ಬಂದ ಮಹಿಳೆಯನ್ನೇ‌ ಪೊಲೀಸ್ ಅಧಿಕಾರಿಯೊಬ್ರು ತಮ್ಮ ಬಲೆಗೆ ಬಿಳಿಸಿಕೊಂಡು ಆಕೆಯ ಪತಿಯ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಓರ್ವ ಮಗ ಇದ್ದರು ಸಹ ಪೊಲೀಸಪ್ಪನೊಂದಿಗೆ ಮಹಿಳೆಯ ಲವ್ವಿಡವ್ವಿ ಫೋಟೋಗಳು ವೈರಲ್ ಆಗಿವೆ.

ವಿಜಯಪುರ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ದೂರು ನೀಡಲು ಹೋಗಿದ್ದ ಮಹಿಳೆಯನ್ನೇ ಪೊಲೀಸ್ ಅಧಿಕಾರಿ ತನ್ನ ಬಲೆಗೆ ಬಿಳಿಸಿಕೊಂಡು ಆಕೆಯ ಗಂಡನ ಕುಟುಂಬಕ್ಕೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಭೀಮಾಶಂಕರ್ ಹೋಳ್ಕರ್ ಪತ್ನಿ ಅನುರಾಧಾ ಪೊಲೀಸ್ ಅಧಿಕಾರಿಯ ಬಲೆಗೆ ಬಿದ್ದಿರುವ ಗೃಹಿಣಿಯಾಗಿದ್ದಾಳೆ. ಕಳೆದ 10 ವರ್ಷಗಳ ಹಿಂದೆ ಭೀಮಾಶಂಕರ ಮದುವೆಯಾದ ಅನುರಾಧಾಗೆ ಓರ್ವ ಮಗನಿದ್ದಾನೆ. ಆಲಮೇಲ ಪಟ್ಟಣದಲ್ಲಿ ಸಂಸಾರ ನಡೆಸುತ್ತಿದ್ದ ಅನುರಾಧಾ ಹಾಗೂ ಭೀಮಾಶಂಕರ ನಡುವೆ ಐದು ವರ್ಷಗಳ ಹಿಂದೆ ಕೌಟುಂಬಿಕ ಕಲಹ ಉಂಟಾಗುತ್ತದೆ‌. ಆ ವೇಳೆ ಆಲಮೇಲ ಠಾಣೆಯಲ್ಲಿ ಎಎಸ್ ಐ ಆಗಿದ್ದ ಮನೋಹರ್ ಕಂಚಗಾರ ಅವರಿಗೆ ದೂರು ನೀಡುತ್ತಾಳೆ. ಪ್ರಕರಣ ಸಂಬಂಧ ವಿಚಾರಣೆಗೆ ಬರುತ್ತಿದ್ದ ವೇಳೆ ಪರಿಚಯವಾಗಿ ಬಳಿಕ ಪ್ರೀತಿ, ಪ್ರೇಮಕ್ಕೆ ತಿರುಗಿದೆ. ಬಳಿಕ ಇಬ್ಬರು ಸೇರಿ ಗಂಡನ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದು, ನ್ಯಾಯಕ್ಕಾಗಿ ಗಂಡ, ಅತ್ತೆ ಹಾಗೂ ಆಕೆಯ ಮಗು ಅಲೆದಾಡುತ್ತಿದ್ದಾರೆ.

ಪತ್ನಿ ಹಾಗೂ ಪೊಲೀಸ್ ಅಧಿಕಾರಿಯ ಅನೈತಿಕ ಸಂಬಂಧ ಗೊತ್ತಾದ ಬಳಿಕ ಭೀಮಾಶಂಕರ ತನ್ನ ಕುಟುಂಬ ಸಮೇತ 2023 ರಲ್ಲಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದ. ಊರಲಿದ್ದ ಆಸ್ತಿ ಮಾರಾಟ ಮಾಡಿ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಿ ಸಂಸಾರ ನಡೆಸಿದ್ದ. ಆದ್ರೆ ಅಲ್ಲಿಯೂ ಕೌಟುಂಬಿಕ ಕಲಹ ಉಂಟಾಗಿ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಳು. ಯಾವಾಗ ಪತ್ನಿ ಅನುರಾಧ ಹಾಗೂ ಪೊಲೀಸ್ ಅಧಿಕಾರಿಯ ಅನೈತಿಕ ಸಂಬಂಧ ಭೀಮಾಶಂಕರಗೆ ಗೊತ್ತಾಯಿತೋ ಆಗ ಇಬ್ಬರು ಮಕ್ಕಳನ್ನು ಆಕೆಯ ಬಳಿಯೇ ಬಿಟ್ಟು ತನ್ನೂರಿಗೆ ಬಂದಿದ್ದ. ಕೆಲ ದಿನಗಳ ಬಳಿಕ ಭೀಮಾಶಂಕರ ಪುತ್ರ ಬೇರೆಯವರ ಮೊಬೈಲ್​ನಿಂದ ಕಾಲ್ ಮಾಡಿ ತನ್ನನ್ನು ಕರೆದುಕೊಂಡು ಹೋಗು. ಅಮ್ಮನ ಬಳಿ ಓರ್ವ ವ್ಯಕ್ತಿ ಬರುತ್ತಾನೆ. ಆತನಿಗೆ ನಾನು ತಂದೆ ಎಂದು ಕರೆಯಬೇಕೆಂದು ಅಮ್ಮ ಹೇಳುತ್ತಾರೆ. ನನ್ನ ತಂದೆ ಭೀಮಾಶಂಕರ ಎಂದು ಹೇಳಿದ್ದಕ್ಕೆ ಕೈಯನ್ನು ಬೂಟಿನಿಂದ ತುಳಿದು ಹಿಂಸೆ ಕೊಟ್ಟಿದ್ದಾರೆ. ಮೈಗೆ ಬರೆ ಹಾಕಿದ್ದಾರೆ ಎಂದು ಕಣ್ಣಿರು ಹಾಕಿದ ಹಾಕಿದ್ದಾನೆ. ಇದೀಗ‌ ನ್ಯಾಯಕ್ಕಾಗಿ ಕುಟುಂಬ ಆಗ್ರಹಿಸಿದೆ.

ಸದ್ಯ ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಭೀಮಾಶಂಕರ ಮಾಹಿತಿ ನೀಡಿದ್ದಾನೆ. ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕು.

Tags:

error: Content is protected !!