Vijaypura

ಮಹಿಳೆಯ ಕಿವಿ ಕತ್ತರಿಸಿ ಕಿವಿವೋಲೆ ಕದ್ದ ಖದೀಮರು; ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

Share

ಮನೆಯಿಂದ ಹಾಲು ತರಲೆಂದು ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಖದೀಮರು ಹಿಂಬಾಲಿಸಿದ್ದಾರೆ. ಇನ್ನೂ ಅಕ್ಕಪಕ್ಕದಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಖದೀಮರು ಆ ಮಹಿಳೆಯ ಕಿವಿಯನ್ನು ಚಾಕುವಿನಿಂದ ಕತ್ತರಿಸಿ ಕಿವಿಯೋಲೆ ಹಾಗೂ ಮುಖಕ್ಕೆ ಗುದ್ದಿ ಮಾಂಗಲ್ಯ ಸರ ಕದ್ದು ಎಸ್ಕೇಪ್ ಆಗಿದ್ದಾರೆ. ಗಂಭೀರ ಗಾಯಗೊಂಡ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಘಟನೆ ನಡೆದ ಕೆಲ ಹೊತ್ತಿನಲ್ಲಿ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಗಾದರೆ ಈ ಘಟನೆ ನಡೆದಿದ್ದಾರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ಗುಮ್ಮಟ ನಗರಿ ವಿಜಯಪುರ ದಲ್ಲಿ ಇತ್ತೀಚಿನ‌ ದಿನಗಳಲ್ಲಿ ಯುವಕರು ಮಾದಕ ವಸ್ತುವಿನ‌ ದಾಸರಾಗುತ್ತಿದ್ದಾರೆ. ಮಾದಕ ವ್ಯಸನ ಸೇವನೆ ಬಳಿಕ ಅವರು ಯಾರನ್ನು ಏನೂ ಬೇಕಾದರೂ ಮಾಡಲು ಮುಂದಾಗುತ್ತಾರೆ. ವಿಜಯಪುರ ನಗರದ ದಿವಟಗೇರಿ ಗಲ್ಲಿಯಲ್ಲಿ ನಿನ್ನೆ ಸಂಜೆ ಸುಮಾರ 7 ಗಂಟೆಗೆ ಹಾಲು ತರಲೆಂದು ಕಲಾವತಿ ಗಾಯ್ಕವಾಡ್ (45) ಎಂಬ ಮಹಿಳೆ ಮನೆಯಿಂದ ಹೋಗುವ ಸಂದರ್ಭದಲ್ಲಿ ಇಬ್ಬರು ಯುವಕರು ಆಕೆಯನ್ನು ಹಿಂಬಾಲಿಸಿ ಯಾರು ಇಲ್ಲದ ಸ್ಥಳದಲ್ಲಿ ಆಕೆಯ ಕಿವಿಯನ್ನು ಚಾಕುವಿನಿಂದ ಕತ್ತರಿಸಿ ಕಿವಿವೋಲೆ ಕದ್ದಿದ್ದಾರೆ, ಬಳಿಕ ಮುಖಕ್ಕೆ ಗುದ್ದಿ ಮಾಂಗಲ್ಯ ಸರ ಕದ್ದು ಎಸ್ಕೇಪ್ ಆಗಿದ್ದಾರೆ. ಇನ್ನೂ ಹಲ್ಲೆ ಮಾಡುವಾಗ ನಾವು ನಿಮ್ಮ ಮಗನ ಗೆಳೆಯರು ಎಂದು ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಮಹಿಳೆಯ ಮಾತು. ಇನ್ನೂ ಮಾಸ್ಕ್ ಹಾಕಿಕೊಂಡು ಬಂದ ಇಬ್ಬರು ಯುವಕರಿಂದ ಈ ಕೃತ್ಯ ನಡೆಸಲಾಗಿದೆ…

ಇನ್ನೂ ಕಲಾವತಿ ಗಾಯ್ಕವಾಡ್ (45) ಎಂಬ ಮಹಿಳೆಗೆ ಹಲ್ಲೆಗೈದು ಕಿವಿ ಕತ್ತರಿಸಿದ ಪರಿಣಾಮ ಗಾಯಗೊಂಡ ಮಹಿಳೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯ ಮೇಲಿನ ಹಲ್ಲೆಯಿಂದ ದಿವಟಗೇರಿ ಗಲ್ಲಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಹಿಳೆಯನ್ನು ಹಿಂಬಾಲಿಸಿ ಬಂದು ಕೃತ್ಯ ನಡೆಸಿ ಪರಾರಿಯಾಗಿದ್ದ ದುಷ್ಕರ್ಮಿಗಳನ್ನ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ, ಬಂಧಿತ ಆರೋಪಿಗಳನ್ನು ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಎಂದು ಗುರುತಿಸಲಾಗಿದೆ.. ಇನ್ನೂ ಒಂದು ಕಿವಿಯು ಕತ್ತರಿಸಿದ ಪರಿಣಾಮ ಮೂರು ಸ್ಟಿಚ್ ಅನ್ನು ವೈದ್ಯರು ಹಾಕಿದ್ದಾರೆ. 10 ಗ್ರಾಂ ಮಾಂಗಲ್ಯ ಸರ, 1ಗ್ರಾಂ ಕಿವಿಯೋಲೆ ಖದೀಮರು ಕದ್ದಿದ್ದು ಅವರನ್ನು ಗೋಳಗುಮ್ಮಟ ಪೊಲೀಸ್ ಠಾಣಾ ಪೊಲೀಸರು‌ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ…

ನಗರ ಹೃದಯ ಭಾಗದಲ್ಲಿ ಇರುವ ದಿವಟಗೇರಿ ಗಲ್ಲಿಯನ್ನು ನಡೆದ ಘಟನೆ ಯಿಂದ ಬಡಾವಣೆ ಜನರು ಸೇರಿದಂತೆ ಗುಮ್ಮಟ ನಗರಿ ಜನರು ಬೆಚ್ಚಿ ಬೀಳುವಂತಾಗಿದೆ. ಇನ್ನೂ ಘಟನೆ ನಡೆದ ಕೇವಲ ನಾಲ್ಕು ಘಂಟೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಮನೆಯ ಪಕ್ಕದವರೇ ಮಹಿಳೆಯ ಕಿವಿ ಕತ್ತರಿಸಿ ಕಿವಿಯೋಲೆ ಕದ್ದಿರುವದು ನಿಜಕ್ಕೂ ಅಮಾನವೀಯ ಘಟನೆಯಾಗಿದೆ…

Tags:

error: Content is protected !!