Dharwad

ಧಾರವಾಡ ಹೊರವಲಯದ ರಾ.ಹೆದ್ದಾರಿ ಯರಿಕೊಪ್ಪದ ಮಿಶ್ರಾ ಸ್ವಟ್ಸ್ ಬಳಿ ಭೀಕರ ರಸ್ತೆ ಅಪಘಾತ.

Share

ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಗೂಡ್ಸ್ ವಾಹನದ ಚಕ್ರದಡಿ ಸಿಲುಕಿ ಬೈಕ್ ಸಾವರರಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ತಡ ಸಂಜೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗದಲ್ಲಿ ನಡೆದಿದೆ.

ವೈ- ಧಾರವಾಡದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪದ ಮಿಶ್ರಾ ಸ್ವಿಟ್ಸ್ ಮುಂಭಾಗ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಚಾಲಕರಿಬ್ಬರು ಲಾರಿ ಚಕ್ರದಡಿ ಸಿಲುಕಿದ ಪರಿಣಾಮ ಮೃತ ದೇಹಗಳು ರಸೆಯಲ್ಲಿ ಚಿದ್ರಗೊಂಡಿವೆ. ಇನ್ನೂ ಮೃತ ಬೈಕ್ ಸವಾರಿಬ್ಬರು ಧಾರವಾಡ ಮೂಲದ ಗೌಳಿ ಗಲ್ಲಿಯ ಕಿಶನ್ ಖಾನವಾಲೆ(30), ಕಿರಣ ಖಡವಾಕರ್(32) ಎಂದು ಗುರುತಿಸಲಾಗಿದೆ. ಇನ್ನು ಬೈಕ್ ಸಂಖ್ಯೆ( KA 25 EZ 8577) ಲಾರಿ ಸಂಖ್ಯೆ (KA 19 B 9688) ಈ ಎರಡು ವಾಹನ ಮದ್ಯ ಅಪಘಾತ ನಡೆದಿದ್ದು, ಸ್ಥಳೀಯರು ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಲಾರಿ ಮತ್ತು ಬೈಕ್ ನಡುವೆ ನಡೆದ ಈ ದುರ್ಘಟನೆಯಲ್ಲಿ ಬೈಕ ಸವಾರಿಬ್ಬರು ಮೃತ ದೇಹಗಳು ರಸ್ತೆಯಲ್ಲಿ ಚಿದ್ರವಾಗಿದ್ದು, ಕೆಲಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡು ಪೊಲೀಸರು ಮೃತ ದೇಹಗಳನ್ನು ತೆರವುಗೊಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ ತಿನಿಖೆ ಕೈಗೊಂಡಿದ್ದಾರೆ. ಹುಬ್ಬಳ್ಳಿ ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತದಲ್ಲಿ ಸಾವಿನ‌ ಸಂಖ್ಯೆ ಏರುತ್ತಲೇ ಸಾಗಿದ್ದು, ಆದಷ್ಟು ಬೇಗ ಕಾಮಗಾರಿ‌ ಪೂರ್ಣಗೊಳಿಸಿ ಅಪಘಾತಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಅವಳಿನಗರದ ಜನತೆಯ ಆಗ್ರಹವಾಗಿದೆ. ಇನ್ನೂ ಈ ಘಟನೆ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Tags:

error: Content is protected !!