ತಮ್ಮ ಮಾತಿನ ಮೂಲಕ ಲಿಂಗಾಯತ ಸ್ವಾಮೀಜಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮಹಾರಾಷ್ಟ್ರ ರಾಜ್ಯದ ಕೊಲಾಪುರ ಕನ್ನೇರಿ ಮಠದ ಶ್ರೀಗಳಿಗೆ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಬಳಿಕ ಸುಪ್ರೀಮ್ ಮೆಟ್ಟೆಲೆರಿದ್ದ ಪ್ರಕರಣದಲ್ಲಿ ಕನ್ನೇರಿ ಶ್ರೀಗಳಿಗೆ ಸೋಲಾಗಿತ್ತು. ಈಗ ಮುಂದುವರೆದು ಕನ್ಹೇರಿ ಶ್ರೀಗಳ ಬೆಂಬಲಕ್ಕೆ ನಿಂತು ನಾಳೆ ಬಬಲೇಶ್ವರದಲ್ಲಿ ನಡೆಯುತ್ತಿರುವ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ 300 ಜನ ಮಠಾಧೀಶರು ಭಾಗಿಯಾಗುತ್ತಿದ್ದಾರೆ ಎನ್ನಲಾಗ್ತಿದೆ. ಈ ನಡುವೆ ಲಿಂಗಾಯತ ಸ್ವಾಮೀಜಿಗಳ ವಿರೋಧದ ನಡುವೆಯೂ ಭರದ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…


ಮಹಾರಾಷ್ಟ್ರ ರಾಜ್ಯದ ಕೊಲಾಪುರ ಕನ್ನೇರಿ ಮಠದ ಶ್ರೀಗಳು ಲಿಂಗಾಯತ ಸ್ವಾಮೀಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ಶ್ರೀಗಳಿಗೆ ಡಿಸೆಂಬರ್ 16 ರವರೆಗೆ ವಿಜಯಪುರ ಜಿಲ್ಲಾ ಪ್ರವೇಶ ನಿಷೇದಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತು. ಬಳಿಕ ಸುಪ್ರೀಂ ಕೋರ್ಟ್ ಮೆಟ್ಟೆಲೇರಿದ್ದ ಶ್ರೀಗಳು ಅಲ್ಲಿಯೂ ಗೆಲ್ಲಲು ಸಾಧ್ಯವಾಗಿರಲಿಲ್ಲಾ. ವಿಜಯಪುರ ಜಿಲ್ಲೆಯ ರಾಜಕಾರಣದಲ್ಲಿ ಕೆಸರಾಟಗಳು ನಡೆದು ಹೋದವು. ಈ ಕೆಸರಾಟದ ನಡುವೆ ಅವಧಿ ಮುಗಿದ ಹಿನ್ನೆಲೆಯಲ್ಲಿ ನಾಳೆ ಸಚಿವ ಎಂ.ಬಿ.ಪಾಟೀಲ ಕ್ಷೇತ್ರ ಬಬಲೇಶ್ವರ ದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಶ್ರೀಗಳನ್ನು ವಿಜಯಪುರ ಜಿಲ್ಲೆಗೆ ಸ್ವಾಗತಿಸಲು ಹಲವು ಸ್ವಾಮೀಜಿಗಳು , ರಾಜಕಾರಣಿಗಳು, ಅದರಲ್ಲೂ ಬಿಜೆಪಿ ನಾಯಕರು ಉತ್ಸುಕರಾಗಿದ್ದಾರೆ. ಈ ನಡುವೆ ಭರ್ಜರಿ ಸಿದ್ಧತೆಗಳು ನಡೆಯಿತ್ತಿದ್ದರೆ ಇತ್ತ ಲಿಂಗಾಯತ ಸ್ವಾಮೀಜಿಗಳು ಈ ಹಿಂದೆ ಶಿವಯೋಗ ಮಂದಿರದ ಕುರಿತು ಮಾತನಾಡಿ ಎಲ್ಲ ಸ್ವಾಮೀಜಿಯವರಿಗೆ ನೋವುನುಂಟು ಮಾಡಿದ್ದಾರೆ. ಮುಂದುವರೆದು ಸ್ವಾಮೀಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದ ಕನ್ಹೇರಿ ಶ್ರೀಗಳ ಬೆಂಬಲಕ್ಕೆ ನಿಂತು ಬಬಲೇಶ್ವರದಲ್ಲಿ ನಡೆಯುತ್ತಿರುವ ಬಸವಾದಿ ಶರಣರ ಹಿಂದೂ ಸಮಾವೇಶದಲ್ಲಿ 300 ಜನ ಮಠಾಧೀಶರು ಬರುತ್ತಿದ್ದಾರೆ ಎಂದು ಎಲ್ಲೆಡೆ ಸುದ್ದಿ ಹರಡಿಸುತ್ತಿದ್ದಾರೆ. ಇವರಿಗೆ ಅವಾಚ್ಯ ಶಬ್ದಗಳಿಂದ ಮತ್ತು ಸುಪ್ರಿಂ ಕೋರ್ಟ್ ನಲ್ಲಿ ಛೀಮಾರಿ ಹಾಕಿಸಿಕೊಂಡವರ ಬೆಂಬಲಕ್ಕೆ ವೀರಶೈವ ಲಿಂಗಾಯತ ಮಠಾಧಿಪತಿಗಳು ಬೆಂಬಲಿಸುವುದಿಲ್ಲ. ಸ್ವಾಮಿಜಿಗಳನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿರುವ ಸ್ವಾಮಿಯೊಬ್ಬರ ವೈಭವಿಕರಣ ಮಾಡಲು ಮತ್ತು ರಾಜಕೀಯ ಉದ್ದೇಶಕ್ಕಾಗಿ ಈ ಸಮಾವೇಶ ಮಾಡುತ್ತಿದ್ದಾರೆ. ನಿಜವಾದ ಸ್ವಾಮಿಗಳು ಯಾರೂ ಕೂಡ ಇದರಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಒಂದು ಕಡೆ ಲಿಂಗಾಯತ ಸ್ವಾಮೀಜಿಗಳು ವಿರೋಧದ ನಡುವೆಯೂ ಶ್ರೀಗಳಿಗೆ ಭರ್ಜರಿ ಸ್ವಾಗತ ನೀಡುವ ಸಮಾವೇಶ ಕಾರ್ಯಕ್ರಮಗಳು ಭರ್ಜರಿಯಾಗಿ ನಡೆದಿವೆ. ಇತ್ತ ಬಿಜೆಪಿ ಮುಖಂಡರು ಮಾತ್ರ ಈ ಕಾರ್ಯಕ್ರಮ ರಾಜಕೀಯ ವಲ್ಲಾ, ಇದೊಂದು ಬಸವಾದಿ ಶರಣರ ಆಶಯಗಳು, ಸಾಮಾಜಿಕ ಸಮಾನತೆ ಹಾಗೂ ಧಾರ್ಮಿಕ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಬಸವಾದಿ ಶರಣರ ಹಿಂದೂ ಬೃಹತ್ ಸಮಾವೇಶ ಕಾರ್ಯಕ್ರಮವಾಗಿದೆ ಎನ್ನುತ್ತಿದ್ದಾರೆ. ಇನ್ನೂ ಈ ಸಮಾವೇಶವು ಶರಣರ ತತ್ವಗಳು, ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶವನ್ನು ಹೊಂದಿದೆ. ಧರ್ಮ, ಸಂಸ್ಕೃತಿ ಹಾಗೂ ಸಾಮಾಜಿಕ ಸಮನ್ವಯದ ಕುರಿತು. ಪೂಜ್ಯರ ಆಶೀರ್ವಚನಗಳು ಮತ್ತು ಮಾರ್ಗದರ್ಶನ ಈ ಸಮಾವೇಶಕ್ಕೆ ವಿಶೇಷ ಶಕ್ತಿ ನೀಡಲಿವೆ. ಈ ಸಮಾವೇಶದಲ್ಲಿ ನಾಡಿನ ಅನೇಕ ಸ್ವಾಮೀಜಿಗಳು, ವಿವಿಧ ಸಮಾಜದ ಗಣ್ಯರು ಹಾಗೂ ರೈತರು, ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುತ್ತಿದ್ದಾರೆ.
ಒಟ್ಟಾರೆ ಸಮಾವೇಶ ದ ಹೆಸರಿನಲ್ಲಿ ಶ್ರೀಗಳನ್ನು ಸ್ವಾಗತಿಸುವದು ಒಂದು ಕಡೆಯಾದರೇ ಕನ್ನೇರಿ ಶ್ರೀಗಳ ನಿರ್ಬಂಧ ವಿಚಾರದಲ್ಲಿ ಸಚಿವ ಎಂ.ಬಿ.ಪಾಟೀಲ ಹಸ್ತಕ್ಷೇಪದ ಆರೋಪವಿತ್ತು. ಹೀಗಾದ್ರೂ ಎಂ.ಬಿ.ಪಾಟೀಲರನ್ನು ಮಣಿಸುವ ತಂತ್ರಗಾರಿಕೆ ಅಡಗಿದೆ ಎನ್ನುವದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
