ಸಹಕಾರಿ ಸಂಸ್ಥೆಗಳ ಏಳ್ಗೆಗೆ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.


ಬೆಳಗಾವಿಯ ಜೀರಗೆ ಸಭಾಗೃಹದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬ್ಯಾಂಕಿನ ಶಾಸನಬದ್ಧ ಸಹಕಾರಿ ಸಂಸ್ಥೆಯ ವತಿಯಿಂದ ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಸಹಕಾರಿ ಸಂಸ್ಥೆಗಳ ಏಳ್ಗೆಗೆ ಬೇಕಾದ ಸಹಕಾರವನ್ನು ನೀಡಲೂ ಸಿಎಂ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಸದಾ ಸಿದ್ಧವಾಗಿದೆ. ಸಾರ್ವಜನಿಕರ ಹಣ ಸುರಕ್ಷಿತವಾಗಿರಬೇಕು. ಸೌಹಾರ್ದ ಸಂಸ್ಥೆಗಳ ಪ್ರಾಮಾಣಿಕ ಸೇವೆ ಮತ್ತು ವ್ಯವಹಾರಗಳು ಜನರ ಮೆಚ್ಚುಸುವಂತಿರಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸಹಕಾರವೆಂದರೇ, ಎಲ್ಲರ ಜೀವನವನ್ನು ಅಭಿವೃದ್ಧಿಪಡಿಸಲು ಸಲ್ಲಿಸುವ ಅತ್ಯುತ್ತಮ ಸೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕತೆಯನ್ನು ಸುಧಾರಿಸಲು ಸಹಕಾರಿ ಕ್ಷೇತ್ರವು ಸಹಾಯಕವಾಗಿದೆ. ಸಹಕಾರ ಸಂಘದ ಸೇವೆ ದೇವರ ಸೇವೆ ಎಂದರು. ಸಹಕಾರಿ ಚಳುವಳಿ ಮತ್ತು ಸಹಕಾರಿ ಕ್ಷೇತ್ರ ಅಭಿವೃದ್ಧಿಯನ್ನು ಸಾಧಿಸಲಿ. ಮಹಾಂತೇಶ್ ಕವಟಗಿಮಠ ಅವರು ಇದಕ್ಕಾಗಿ ಹೆಚ್ಚು ಮುತುವರ್ಜಿಯನ್ನು ವಹಿಸುತ್ತಾರೆ ಎಂದು ಪ್ರಶಂಸಿಸಿದರು.
ಉತ್ತರ ಶಾಸಕ ಆಸೀಫ್ ಸೇಠ್ ಅವರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
