2025ನೇ ವರ್ಷ ಕೊನೆಯ ದಿನಗಳ ಆರಂಭವಾಗಿದ್ದ ಹಿನ್ನಲೆಯಲ್ಲಿ ಎಲ್ಲೆಡೆ ಈಗ 2026 ಹೊಸ ವರ್ಷ ಸ್ವಾಗತಕ್ಕೆ ನಗರಗಳು ಸಜ್ಜಾಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿ ರೌಡಿಗಳ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಹೌದು ..ಧಾರವಾಡ ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಎಸಿಪಿ ಪ್ರಶಾಂತ್ ಸಿದ್ಧನಗೌಡರ ನೇತೃತ್ವದಲ್ಲಿ ರೌಡಿ ಪರೇಡ್ ನಡೆಸಿ, ರೌಡಿಗಳಿಗೆ ಎಸಿಪಿಯವರು ಖಡಕ್ ಎಚ್ಚರಿಕೆ ನೀಡಿದರು. ಧಾರವಾಡ ಶಹರ ಪೊಲೀಸ್ ಠಾಣೆ, ಉಪನಗರ ಪೊಲೀಸ್ ಠಾಣೆ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಕಾನೂನು ಪಾಠ ಮಾಡುವುದರ ಜತೆಗೆ ಅಹಿತಕರ ಘಟನೆಗಳಲ್ಲಿ ಭಾಗಿಯಾದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿವುದು ಎಂದು ಪೊಲೀಸ್ ಭಾಷೆಯಲ್ಲಿ ವಾರ್ನಿಂಗ್ ನೀಡಿದರು. ಅಲ್ಲದೆ ಯಾವುದೇ ಅಹಿತಕರ ಘಟನೆಗಳು ತಮ್ಮ ಗಮನಕ್ಕೆ ಬಂದಲ್ಲಿ ಪೊಲೀಸ್ ಠಾಣೆಗೆ ತಿಳಿಸುವುದರ ಮೂಲಕ ಸಮಾಜಿಕ ಜವಾಬ್ದಾರಿ ಮೇರೆಯಬೇಕು, ಹೊಸ ವರ್ಷ ಎಲ್ಲರೂ ಮಾದರಿ ಜೀವನ ಕಟ್ಟಿಕೊಳ್ಳಬೇಕು ಎಂದು ರೌಡಿ ಪರೇಡ್ ವೇಳೆ ಎಸಿಪಿಯವರು ತಿಳುವಳಿಕೆ ಹೇಳಿದರು.
