BELAGAVI

ಬೆಳಗಾವಿ ಉತ್ಸವಕ್ಕೆ ಆಗಮಿಸಿದ ನಿನಾಸಂ ಸತೀಶ್, ನಟಿ ಸಪ್ತಮಿ ಗೌಡ, ಡಾಲಿ ಧನಂಜಯ್

Share

ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಶಿವಾನಂದ ನೀಲಣ್ಣನವರ ವತಿಯಿಂದ ಬೆಳಗಾವಿ ಉತ್ಸವ ಕಾರ್ಯಕ್ರಮ ನಡೆಯಲಿದ್ದು ಇಂದು ಬೆಳಗಾವಿಗೆ ಆಗಮಿಸಿದ ನಟ ನಿನಾಸಂ ಸತೀಶ್, ನಟಿ ಸಪ್ತಮಿ ಗೌಡ, ಡಾಲಿ ಧನಂಜಯ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಇಂದು ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಶಿವಾನಂದ ನೀಲಣ್ಣನವರ ವತಿಯಿಂದ ಬೆಳಗಾವಿ ಉತ್ಸವ ಕಾರ್ಯಕ್ರಮ ನಡೆಯಲಿದ್ದು ಇಂದು ಬೆಳಗಾವಿಗೆ ಆಗಮಿಸಿದ ನಟ ನಿನಾಸಂ ಸತೀಶ್, ನಟಿ ಸಪ್ತಮಿ ಗೌಡ, ಡಾಲಿ ಧನಂಜಯ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಟರೆಲ್ಲರೂ ರಾಣಿ ಚೆನ್ನಮ್ಮನ್ನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ನಟ ನಿನಾಸಂ ಸತೀಶ್ ಬೆಳಗಾವಿಗೆ ಬರುವುದೆಂದರೇ ಒಂದು ವಿಶೇಷ. ಬೆಳಗಾವಿಯಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸಿದ್ದಾರೆ. ರೈಸ್ ಆಫ್ ಅಶೋಕ ತಂಡ ಇಲ್ಲಿ ತಮ್ಮ ಸಿನೆಮಾವನ್ನು ಪ್ರಮೋಷನ್ ಮಾಡುತ್ತಿದ್ದೇವೆ. ಬೆಳಗಾವಿ ಗಡಿಯಲ್ಲಿ ಇಷ್ಟೊಂದು ಕನ್ನಡವಿದೆ ಎಂದರೇ, ಇದಕ್ಕೆ ಕನ್ನಡಿಗರ ಹೋರಾಟವೇ ಕಾರಣ. ನಾಡು ನುಡಿ ಹೋರಾಟಕ್ಕೆ ಕನ್ನಡಿಗರ ಜೊತೆ ಚಿತ್ರರಂಗದವರು ಯಾವತ್ತೂ ಜೊತೆಗೆ ನಿಂತಿದ್ದೇವೆ ಎಂದರು.

ನಟಿ ಸಪ್ತಮಿ ಗೌಡ ಅವರು ಬೆಳಗಾವಿಯಲ್ಲಿ ಇಷ್ಟೊಂದು ದೊಡ್ಡ ಕನ್ನಡದ ಉತ್ಸವವನ್ನು ಮಾಡುತ್ತಿರುವುದು ಸಂತಸದ ಸಂಗತಿ. ಎಲ್ಲರೂ ನಮ್ಮ ರೈಸ್ ಆಫ್ ಅಶೋಕ ನೋಡಿ. ಕನ್ನಡ ಚಿತ್ರಗಳನ್ನು ವಿಕ್ಷೀಸುವುದು ಕೂಡ ಕನ್ನಡದ ಹೋರಾಟವೇ. ಕನ್ನಡ ಚಲನಚಿತ್ರಗಳನ್ನು ವಿಕ್ಷೀಸಿದರೇ, ಕಲಾವಿದರೂ ಬೆಳೆಯುತ್ತಾರೆ. ಹಲವು ಕುಟುಂಬಗಳೂ ಬೆಳೆಯುತ್ತವೆ. ಅವರಿಗೆ ಜೀವನ ಆಧಾರ ಸಿಗುತ್ತದೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು, ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧ ಲೋಕಸಭಾ ಸ್ಪೀಕರ್’ಗೆ ಕಿಡಿಗೇಡಿಗಳು ದೂರು ನೀಡಿದ್ದಾರೆ. ಬೆಳಗಾವಿಯ ಒಂದು ಹಿಡಿ ಮಣ್ಣು ಮುಟ್ಟಲು ಕೂಡ ಅವರಿಂದ ಸಾಧ್ಯವಿಲ್ಲ. ಇಲ್ಲಿನ ಕನ್ನಡಿಗರು ಗಟ್ಟಿಯಾಗಿದ್ದಾರೆ. ನಾವು ಯಾರಿಗೂ ಬೆಳಗಾವಿಗೆ ಬರಬೇಡಿ ಎಂದು ಹೇಳಿಲ್ಲ. ದ್ವೇಷದ ಬೀಜ ಬಿತ್ತಲೂ ಬರುತ್ತಿದ್ದ, ಲೋಕಸಭಾ ಸದಸ್ಯರಿಗೆ ಡಿಸಿ ಅವರು ನಿರ್ಬಂಧ ಹೇರಿದ್ದು, ಒಳ್ಳೆಯ ಕೆಲಸ ಮಾಡಿದ್ದಾರೆ. ಶೇ.60 ರಷ್ಟು ಕನ್ನಡ ಫಲಕದ ಆದೇಶವಿದ್ದರೂ ಬೆಳಗಾವಿಯಲ್ಲಿ ಇನ್ನು ಅದು ಜಾರಿಯಾಗಿಲ್ಲ. ಬೆಳಗಾವಿ ಜಿಲ್ಲಾಧಿಕಾರಿಗಳು ಮೊದಲೂ ಈ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಡಾಲಿ ಧನಂಜಯ್ ಅವರು ಬೆಳಗಾವಿಗೆ ಬಂದಾಗಲೆಲ್ಲ ಖುಷಿಯಾಗುತ್ತದೆ. ಈ ಬಾರಿ ಬೆಳಗಾವಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ನಮ್ಮ ಜೀವ ನಮ್ಮ ಭಾಷೆ. ಅದರೊಂದಿಗೆ ನಾವು ಸದಾ ಇರುತ್ತೇವೆ. ಅಭಿಮಾನಿಗಳು ಕಿತ್ತಾಡದೇ, ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಸಿನೆಮಾವನ್ನು ವಿಕ್ಷೀಸಿ ಪ್ರೋತ್ಸಾಹಿಸಬೇಕು ಎಂದರು.

ಇನ್ನು ಆಯೋಜಕ ಶಿವಾನಂದ ನೀಲಣ್ಣನವರ, ಬೆಳಗಾವಿ ಜನರು ಪ್ರೀತಿ ಹಂಚಿಕೊಳ್ಳುವ ದಿನ ಬಂದಿದೆ. ದೇಶದ ಜನರಿಗೆ ಪ್ರೀತಿ ವಿಶ್ವಾಸ ಹಂಚಿಕೊಂಡು ಎಲ್ಲರೂ ಒಂದಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಲವಾರು ಕಲಾವಿದರು ಆಗಮಿಸಿದ್ದಾರೆ. ಇದು ಚುನಾವಣೆಯ ತಯಾರಿಯಲ್ಲ. ಪ್ರೀತಿಯನ್ನು ಹುಟ್ಟು ಹಾಕಬೇಕಿದೆ. ದುಡ್ಡಿನಲ್ಲಿ ಧಮ್ಮಿಲ್ಲ. ಪ್ರೀತಿಯಲ್ಲಿ ಧಮ್ಮಿದೆ ಎಂಬುದನ್ನು ತೋರಿಸಲು ಹೊರಟಿರುವುದಾಗಿ ತಿಳಿಸಿದರು.

Tags:

error: Content is protected !!