Kagawad

ರಾಜ್ಯದ ಗಡಿ ಭಾಗದ ಶಾಲೆಗಳ ಸಮಸ್ಯೆಗಳಗೆ ಸ್ಪಂದಿಸುತ್ತೇನೆ ಸೋಮಣ್ಣ ಬೇವಿನಮರದ.

Share

ಕರ್ನಾಟಕ ರಾಜ್ಯದಲ್ಲಿ ಸನ್ 2010 ರಿಂದ ಕಳೆದ 15 ವರ್ಷಗಳಲ್ಲಿ ಕರ್ನಾಟಕ ಪ್ರದೇಶ ರಾಜ್ಯ ಗಡಿಯ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆಯ ವತಿಯಿಂದ ಗಡಿಭಾಗದ ತಾಲೂಕಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ, ಮತ್ತು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಬಗ್ಗೆ ಹೆಚ್ಚಿನ ಒತ್ತು ನೀಡಿ ಬೋಧನೆ ಮಾಡುವುದು, ಶಾಲೆಗಳ ಸಮಸ್ಯೆಗಳಿಗೆ ಸ್ಪಂದಿಸುವುದು, ಕಾರ್ಯ ಕೈಗೊಂಡಿದ್ದೇವೆ ಎಂದು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಕಾರರ ಅಧ್ಯಕ್ಷ ಸೋಮಣ್ಣಾ ಬೇವಿನಮರದ ಕಾಗವಾಡದಲ್ಲಿ ಹೇಳಿದರು.

ಕಾಗವಾಡ ತಾಲೂಕಿನ ಕವಲಗುಡ್ಡದ ಸಿದ್ದರಾಮ ಆಶ್ರಮದ ಅಮರೇಶ್ವರ ಮಹಾರಾಜರು ಸ್ಥಾಪಿಸಿದ ಶಾಲೆಯ ವಾರ್ಷಿಕೋತ್ಸವ ನಿಮಿತ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಬೇವಿನಮರದ ಇವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿಯೇ 19 ಜಿಲ್ಲೆಯ ಹಾಗೂ 63 ತಾಲೂಕಗಳ ಮತ್ತು 6 ರಾಜ್ಯಗಳ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಮಾಧ್ಯಮಿಕ ಶಾಲೆಗಳಲ್ಲಿಯ ಕುಂದು ಕೊರತೆಗಳು ಆಲಿಸಿ ಅಲ್ಲಿಗೆ ಕೊನೆಗಳು ನಿರ್ಮಿಸುವುದು, ತಡೆಗೋಡಿಗಳು ನಿರ್ಮಿಸುವುದು ವಿದ್ಯಾರ್ಥಿಗಳಿಗೆ ಕನ್ನಡ ಬಗ್ಗೆ ಹೆಚ್ಚಿನ ಆಸಕ್ತಿ ನಿರ್ಮಿಸಿ ಕನ್ನಡ ಉಳಿಸಿ ಬೆಳೆಸಲು ಬಹಳಷ್ಟು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.
ಕವಲಗುಡ್ಡ ಶಾಲೆಗೆ ಈಗಾಗಲೇ ಗ್ರೀನ್ ಬೋರ್ಡ್ ನೀಡಲಾಗಿದೆ ಇನ್ನೂ ಅವಶ್ಯಕತೆ ಇದ್ದಲ್ಲಿ ಗ್ರೀನ್ ಬೋರ್ಡ್ ನೀಡುತ್ತೇವೆ ಎಂಬ ಭರವಸೆ ನೀಡಿದರು.

ನೆರೆಯ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕ್ ದಲ್ಲಿಯ ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷೆಯ ಜ್ಞಾನ ನೀಡಲು ಮರಾಠಿ ಭಾಷೆಯ ಶಿಕ್ಷಕರನ್ನು ನೇಮಕಾತಿ ಮಾಡುತ್ತಿದ್ದರು ಇದನ್ನು ಗಮನದಲ್ಲಿ ಬಂದಾಗ ಕೂಡಲೇ ಸ್ಪಂದಿಸಿ ಅಲ್ಲಿಯ ಸಮಸ್ಯೆ ಇತ್ಯಾದಿಗೊಳಿಸಿದ್ದೇನೆ. ಅಕ್ಕಲಕೋಟ್ ಜಿಲ್ಲೆಯಲ್ಲಿ ಇದೇ ಸಮಸ್ಯೆ ಬಂದಿತ್ತು ಅದನ್ನು ಬಗೆಹರಿಸಿದ್ದೇನೆ. ಅಥಣಿ ತಾಲೂಕಿನ ಕನ್ನಡ ಶಾಲೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಸಮಸ್ಯೆಗಳ ಬಗ್ಗೆ ಸ್ಪಂದಿಸಿದ್ದೇನೆ ಎಂಬ ವಿವರವಾದ ಮಾಹಿತಿ ಪ್ರಾಧಿಕಾರ ಅಧ್ಯಕ್ಷ ಸೋಮನ್ನಾ
ಬೇವಿನಮರದ. ಮಾಧ್ಯಮಗಳೊಂದಿಗೆ ತಮ್ಮ ಮಾಹಿತಿ ಹಂಚಿಕೊಂಡರು.

Tags:

error: Content is protected !!