ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮರ್ಯದೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದ ದಲಿತ ಕುಟುಂಬ ಸದಸ್ಯರ ಆರೋಗ್ಯ ವಿಚಾರಣೆಯನ್ನು ಸಚಿವ ಸಂತೋಷ್ ಲಾಡ್ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿ ನಂತರ ಇನಾಂವೀರಾಪುರ ಗ್ರಾಮಕ್ಕೆ ಭೇಟಿಕೊಟ್ಟರು…


ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ಸಿಕ್ಕು 80 ವರ್ಷ ಆದ್ರೂ ಇಂತಹ ವ್ಯವಸ್ಥೆಯಲ್ಲಿದ್ದೇವೆ. ಸಮಾನತೆ, ಮನುಷ್ಯತ್ವ ಮೇಲೆ ಬರಬೇಕಿದೆ ಎಂದರು. ಜಿಲ್ಲಾಡಳಿತ, ವೈದ್ಯರು ಗಾಯಾಳುಗಳನ್ನ ಸ್ಪಂದಿಸಿ ಜೀವ ಉಳಿಸುವ ಕೆಲಸ ಮಾಡಿದ್ದಾರೆ.
ಪೊಲೀಸರು ಸರಿಯಾದ ಸಮಯಕ್ಕೆ ತೆರಳಿ ಅನಾಹುತ ತಡೆದಿದ್ದಾರೆ. ನಮ್ಮ ಸರ್ಕಾರದ ವತಿಯಿಂದ ಏನು ಆಗಬೇಕು. ಎಸ್ ಪಿ, ಡಿಸಿ ಜೊತೆ ಇದ್ದು ನಾವು ಮಾಡಿದ್ದೇವೆ ಎಂದರು.
ಇಡೀ ಸರ್ಕಾರ ಕುಟುಂಬದ ಜೊತೆ ಇದ್ದೇವೆ .ನಿನ್ನೆ ಪಿಡಿಒ ಸಸ್ಪೆಂಡ್ ಮಾಡಿದ್ದೇವೆ . ನನಗೆ ಹುಷಾರ್ ಇಲ್ಲಾ ಅಂದ್ರು ನಾವು ಮಾಡಿದ್ದೇವೆ . ಸಮಾಜ ಕಲ್ಯಾಣ ಸಚಿವರಿಗೆ ಮಾತಾನಾಡ್ತೇನೆ ಎಂದರು.
ಯಾವ ಇಲಾಖೆ ಸರಿಯಾಗಿ ಸ್ಪಂದಿಸಿಲ್ಲ ಕ್ರಮ ಕೈಗೊಳ್ತೆವೆ. ಅವರು ಸುಳ್ಳು ಹೇಳಿದ್ರೆ ಮಾತಾಡ್ತೇವೆ
ಗ್ರಾಮದಲ್ಲಿ ಕೌನ್ಸಲಿಂಗ ಮಾಡ್ತೇವೆ ಮಾಡಿ. ಗೃಹ ಮಂತ್ರಿ ಜೊತೆ ಮಾತನಾಡ್ತೇವೆ. ಸರ್ಕಾರದ ವತಿಯಿಂದ ಏನು ಮಾಡೋಕೆ ಇದೆ ಮಾಡ್ತೇವೆ ಎಂದರು.
ಸಂಪುಟ ಪುನರಚನೆ ಬಗ್ಗೆ ನನಗೆ ಮಾಹಿತಿ ಇಲ್ಲ
ಮಾಡಿದ್ರು ಹೈಕಮಾಂಡ್, ಸಿಎಂ, ಡಿಸಿಎಂ ಮಾಡಬಹುದು.ಅಜೆಂಡಾದಲ್ಲಿರುವುದಷ್ಟೇ ಮಾತಾಗುತ್ತೆ ಎಂದರು.
ಎಲೆಕ್ಷನ್ ಬಂದಿರೋದಕ್ಕೆ ಕೇರಳ ಸಿಎಂ ಹಾಗೆ ಹೇಳ್ತಾ ಇದ್ದಾರೆ
ಕಾಂಗ್ರೆಸ್ ಇತಿಹಾಸ, ಇಡೀ ದೇಶದ ಇತಿಹಾಸ ಗೊತ್ತಿದೆ. ಕಾಂಗ್ರೆಸ್ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತೆ ಎಂದರು.
ಬಿಜೆಪಿ ಅವರು ಸರ್ಕಾರ ಅಭದ್ರ ಹೇಗೆ ಮಾಡ್ತಾರೆ
ಪವರ್ ಹಾಕಿ ಮಾಡೋಕೆ ಹೇಳಿ, ಒಳ್ಳೇದಲ್ವಾ ಎಂದರು. ಬಹುಮತ ನಮಗೆ ಸಿಕ್ಕಿದೆ, ಅವರು ಹೇಗೆ ಅಭದ್ರ ಮಾಡ್ತಾರೆ. ಖುರ್ಚಿ ಶೇರಿಂಗ್ ಮುಗಿದ ಅಧ್ಯಾಯ ಎಂದರು. ಪ್ರತಿಪಕ್ಷದವರು ಕೇಳಿದಾಗ ನಾನೇ ಮುಖ್ಯಮಂತ್ರಿ ಅಂತ ಸಿಎಂ ಹೇಳಿದ್ದಾರೆ. ಸದನದಲ್ಲಿ ವಿಪಕ್ಷದವರು ಕೇಳಿದಕ್ಕೆ ಸಮರ್ಪಕವಾಗಿ ಉತ್ತರ ಕೊಟ್ಟಿದ್ದಾರೆ ಎಂದರು.
