ವೇಗವಾಗಿ ಹೋಗುತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಹಿಂಬದಿಯಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಬಳಿಕ ಸಾವನೊಪ್ಪಿದ ಘಟನೆ ಗಾಮನಗಟ್ಟಿ ತಾರೀಹಾಳ ರಸ್ತೆಯಲ್ಲಿ ಮದ್ಯಾಹ್ನದ ನಂತರ ನಡೆದಿದೆ.

ಹುಬ್ಬಳ್ಳಿ ಉಣಕಲ್ ಮೂಲದ ಪರಶುರಾಮ ರಜಪೂತ್ ಮೃತ ಬೈಕ್ ಚಾಲಕನೆಂದು ಗುರುತಿಸಲಾಗಿದೆ. ಒಂದು ಲಾರಿ ಮುಂದೆ ಸಾಗಿದ್ದಾಗ
ಇನ್ನೊಂದು ಲಾರಿಯನ್ನು ಓವರ್ ಟೆಕ್ ಮಾಡಲೂ ಹೋಗಿ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಈ ಲಾರಿಗಳ ಹಿಂಬದಿ ಇದ್ದ ಬೈಕ್ ನಿಯಂತ್ರಣ ತಪ್ಪಿ ರಭಸವಾಗಿ ಲಾರಿಗೆ ಡಿಕ್ಕಿ ಆಗಿರುವುದರಿಂದ ಬೈಕ್ ಸವಾರನ ತಲೆ ಭಾಗಕ್ಕೆ ತೀವ್ರಾದ ಹೊಡೆತ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ನರಳಾಡುತ್ತಿದ್ದ, ಇದನ್ನು ಗಮನಿಸೀದ ಸ್ಥಳೀಯರು ಕೂಡಲೇ ಬೈಕ್ ಸವಾರನ ರಕ್ಷಣೆಗೆ ಧಾವಿಸಿ ಹೈವೆ ಪೆಟ್ರೋಲಿಂಗ್ ನವನಗರ ಎಪಿಎಂಸಿ ಠಾಣೆಗೆ ಮಾಹಿತಿ ನೀಡಿ ಬೈಕ್ ಸವಾರರನ್ನು ಖಾಸಗಿ ವಾಹನದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು, ಆದರೆ ಬೈಕ್ ಸವಾರ ಮಾರ್ಗ ಮಧ್ಯ ಕೊನೆ ಉಸಿರು ಎಳೆದಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳೀಯರ ಮಾಹಿತಿಗೆ ಸ್ಥಳಕ್ಕೆ ಭೇಟಿ ನೀಡಿದ ನವನಗರ ಎಪಿಎಂಸಿ ಪೊಲೀಸ್ ಠಾಣೆಯ ಸಿಬ್ಬಂದಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
