Vijaypura

ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ, ಬಗೆ ಬಗೆಯ ಖಾದ್ಯಗಳ ಘಮಲು…

Share

ಹಿಂದಿನ ದಿನಗಳಲ್ಲಿ ನಮ್ಮ‌ ಪೂರ್ವಜರು ಸಿರಿಧಾನ್ಯ ತಮ್ಮ ದಿನನಿತ್ಯದ ಜೀವನದಲ್ಲಿ ಆಹಾರವಾಗಿ ಬಳಸುತ್ತಿದ್ದರು. ಇದರಿಂದ ಅವರು ಸಾಕಷ್ಟು ಸದೃಡವಾಗಿ ಬಲಶಾಲಿಯಾಗಿಯೂ ಇದ್ದರು. ಆದರೆ ಮಾಡರ್ನ್ ಜಗತ್ತಿನ ಈ ಕಾಲದಲ್ಲಿ ಸಿರಿಧಾನ್ಯ ಮರೆತು ಹೋಗುತ್ತಿದೆ. ಮರೆತು ಹೋಗುತ್ತಿರುವ ಸಿರಿ ಧಾನ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ವಾಣಿಜ್ಯ ಮೇಳೆ ಹಾಗೂ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಸ್ಪರ್ದೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಂಡ ನೂರಾರು ಜನ ವಿಧ ವಿಧದ ಅಡುಗೆಯನ್ನು ಮಾಡಿದ್ದರು. ಹಾಗಾದರೆ ಈ ಸಿರಿಧಾನ್ಯ ಹಾಗೂ ಖಾದ್ಯ ಮೇಳೆ ಆಯೋಜನೆ ಮಾಡಿದ್ದಾದರೂ ಎಲ್ಲಿ ಅಂತೀರಾ. ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್…

ಹೌದು ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಕೃಷಿ ಇಲಾಖೆಯು ಅಂತಾರಾಷ್ಟ್ರೀಯ ರೈತ ದಿನಾಚರಣೆ ಹಿನ್ನೆಲೆಯಲ್ಲಿ ಸಿರಿಧಾನ್ಯ ಹಾಗೂ ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಿತ್ತು. ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿ ಕಾರ್ಯಕ್ರಮ ಆಯೋಜನೆ‌ ಮಾಡಲಾಗಿತ್ತು. ನೂರಾರು ಜನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ತಯಾರಿಸಿದ ಸಿರಿಧಾನ್ಯದ ರುಚಿಯನ್ನು ಜನರಿಗೆ ಉಣ ಬಡಿಸಿದರು…

ಸಿರಿಧಾನ್ಯದಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದರು ಅದರಲ್ಲೂ ಪ್ರಮುಖವಾಗಿ, ನವಣೆ, ಸಜ್ಜೆ ಜೋಳ, ರಾಗಿ, ಹುರುಳಿ, ಸೇರಿದಂತೆ ವಿವಿಧ ಬಗೆಯ ಸಿರಿಧಾನ್ಯಗಳನ್ನು ಬಳಸಿ ಆಹಾರ ತಯಾರಿಸಿದ್ದರು. ಪಾಕ ಸ್ಪರ್ಧೆಯಲ್ಲಿ ತಯಾರಿಸಿದ್ದ ಆಹಾರ ಟೇಸ್ಟ್ ಸವಿದ ಜನರು ರುಚಿ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಜ್ಞಾನ ಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ್ ಪಾಕ ತಯಾರಿಸಿದವರ ಬಳಿ ಹೋಗಿ ಮಾಹಿತಿ ಪಡೆದು ರುಚಿ ಸವಿದರು. ಪಾಕ ಸ್ಪರ್ಧೆಯಲ್ಲಿ ಭಾಗಿಯಾಗಿ ಸಿರಿಧಾನ್ಯದಲ್ಲಿ ಶುಚಿ ರುಚಿಯಾಗಿ ತಯಾರಿಸಿದ ಸ್ಪರ್ಧಾಳುಗಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ಪಾರಿತೋಷಕ ನೀಡಲಾಯಿತು. ಭಾಗಿಯಾದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಸಿರಿಧಾನ್ಯಗಳ ಆಹಾರ ಪದಾರ್ಥ ಬಳಕೆ ಮಾಡದೇ ಈಚೆಗೆ ಪಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಗಳಿಗೆ ಯುವಕ ಯುವತಿಯರು, ಮಕ್ಕಳು ತಿನ್ನುವ ಮೂಲಕ ಆರೋಗ್ಯ ಹದಗೆಟ್ಟ ಹೋಗುತ್ತಿದೆ. ಈ ನಿಟ್ಟಿನಲ್ಲಿ ಜನರಲ್ಲೂ ಸಹಿತ ಈ ವಿಚಾರವಾಗಿ ಜಾಗೃತಿ ಮೂಡಿಸಲು ಸ್ಪರ್ದೆ ಆಯೋಜನೆ ಮಾಡಲಾಗಿತ್ತು…

ಒಟ್ಟಿನಲ್ಲಿ ಸದೃಢ ದೇಹಕ್ಕಾಗಿ ಸಿರಿಧಾನ್ಯ ಪದಾರ್ಥಗಳನ್ನು ಬಳಸುವಂತೆ ಪ್ರೇರಿಸಲು ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಆಯೋಜಿಸಿರೋ ನಿಜಕ್ಕೂ ಶ್ಲಾಘನೀಯವೇ ಸರಿ…

Tags:

error: Content is protected !!