ರಾಜ್ಯ ಸರ್ಕಾರ ಯಾವುದಾದರೂ ದರ ಹೆಚ್ಚಳ ಮಾಡಿದ್ರೇ ರಾಜ್ಯದ ಬಿಜೆಪಿಯ ಎಲ್ಲ ನಾಯಕರು ಮಾತನಾಡುತ್ತಾರೆ. ಆದರೇ, ಈಗ ಕೇಂದ್ರ ಸರ್ಕಾರ ರೈಲಿನ ಟಿಕೇಟ್ ದರ ಹೆಚ್ಚಳ ಮಾಡಿದೇ, ಇದರ ಬಗ್ಗೆ ಯಾಕೆ ಮಾತನಾಡಲ್ಲವೆಂದು ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದರು.

ಇಂದು ದಾವಣಗೆರೆಯಲ್ಲಿ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಅವರು ದೆಹಲಿಗೆ ನಾವು ಪದೇ ಪದೇ ಹೋಗುತ್ತಿಲ್ಲ. ದೆಹಲಿಯಲ್ಲಿ ನಾಳೆ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದಾಗಿ ಸಿಎಂ ತಿಳಿಸಿದರು.
ಇನ್ನು ಚಿತ್ರದುರ್ಗದ ಬಸ್ ಬೆಂಕಿ ದುರಂತಕ್ಕೆ ಸಂಬಂಧಿಸಿದಂತೆ ಟ್ರಕ್ ಡ್ರೈವರ್’ ತಪ್ಪಿನಿಂದಲೇ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಖಾಸಗಿ ಬಸ್ ಸೇರಿದಂತೆ ಎಲ್ಲ ಬಸ್ಸುಗಳಲ್ಲಿ ಸುರಕ್ಷತೆಯನ್ನು ಅನುಸರಿಸಬೇಕು. ಆದರೂ ಈ ಪ್ರಕರಣದ ತನಿಖೆಯನ್ನು ನಡೆಸುತ್ತೇವೆ ಎಂದರು.
ಇನ್ನು ಕೇಂದ್ರ ಸರ್ಕಾರದ ರೈಲ್ವೆ ದರ ಏರಿಕೆ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ ಅವರು ಕೇಂದ್ರ ಸರ್ಕಾರದಿಂದ ರೇಲ್ವೆ ಟಿಕೇಟ್ ದರ ಹೆಚ್ಚಳ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಕುರಿತು ಕರ್ನಾಟಕ ಬಿಜೆಪಿ ನಾಯಕರು ಯಾವುದೇ ಧ್ವನಿ ಎತ್ತುವುದಿಲ್ಲ. ರೈಲ್ವೆ ದರ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ರಾಜ್ಯದ ಬಿಜೆಪಿ ಸಂಸದರು ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತದೆ ಮೌನವಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ರಾಜಕಾರಣದ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನಾಯಕತ್ವದ ಬಗ್ಗೆ ನಿಮಗೆ ಇದೊಂದೇ ಸುದ್ದಿನಾ? ಬೇರೆ ವಿಷಯಗಳೇ ಇಲ್ವಾ?” ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
