Kagawad

ಜೈನ ಸಮಾಜದ ಆಚಾರ್ಯ ವರ್ಧಮಾನಸಾಗರ ಮುನಿ ಮಹಾರಾಜರ ಸಾನಿಧ್ಯದ 26 ಮನಿಗಳ ಶಿರಗುಪ್ಪೆಯಲ್ಲಿ ಭವ್ಯ ಸ್ವಾಗತ ಕೋರಲಾಗಿದೆ.

Share

ವಿಶ್ವದಲ್ಲಿ ಅಹಿಂಸಾ ತತ್ವಗಳು ಸಾರಿ ಹೇಳುತ್ತಿರುವ ಜೈನ ಸಮಾಜದ ದಿಗಂಬರ ಮುನಿಗಳ ಸಂಘದ ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಾನಿಧ್ಯದಲ್ಲಿ 26 ದಿಗಂಬರ ಮುನಿಗಳು ಜೈನ ಸಮಾಜದ ತೀರ್ಥಕ್ಷೇತ್ರ ಶ್ರವಣಬೆಳಗೊಳ ದಿಂದ ಶೀರಗುಪ್ಪಿವರೆಗೆ ಸುಮಾರು ಏಳು ನೂರು ಕಿಲೋಮೀಟರ್ ಅಂತರ ಪಾದಯಾತ್ರೆ ಮುಖಾಂತರ ಆಗಮಿಸಿದ ಮುನಿಗಳಿಗೆ ಶಿರಗುಪ್ಪಿ ಗ್ರಾಮದ ಜೈನ ಸಮಾಜ ವತಿಯಿಂದ ಅದ್ದೂರಿ ವಾಗಿ ಸ್ವಾಗತ ನೀಡಿ, ಬರಮಾಡಿಕೊಂಡರು.

ಶುಕ್ರವಾರ ರಂದು ಶಿರಗುಪ್ಪಿಯ ಪಾರ್ಶ್ವನಾಥ ಜೈನ ಭವನ ದಲ್ಲಿ ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರ ಸಾನಿಧ್ಯದಲ್ಲಿಯ 26 ದಿಗಂಬರ್ ಮುನಿಗಳ ವಿಶೇಷ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಆಚಾರ್ಯ ವರ್ಧಮಾನ ಸಾಗರಜಿ ಮುನಿ ಮಹಾರಾಜರಗೆ ಇರುವ ಆಚಾರ್ಯ ಪದವಿವನ್ನು ಮುನಿ ಸಂಘದ ಯುವ ದಿಗಂಬರ ಮುನಿಗಳಾದ ವಿದ್ಯಾಸಾಗರ್ ಮುನಿ ಮಹಾರಾಜರಿಗೆ ಆಚಾರ್ಯ ಪದವಿ ನೀಡುವ ಕಾರ್ಯಕ್ರಮ ಇದೇ ಫೆಬ್ರವರಿ ತಿಂಗಳಲ್ಲಿ ಜರಗಲಿದೆ.
ಈ ನಿಮಿತ್ಯವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಕೊಲ್ಲಾಪುರ್, ಸಾಂಗ್ಲಿ, ಬೆಳಗಾವಿ, ವಿಜಯ್ಪುರ್, ಮುಂತಾದ ಜಿಲ್ಲೆಯಿಂದ ಅನೇಕ ಶ್ರಾವಕ ಸ್ರಾವಿಕೆಯರು ಆಗಮಿಸಿ ಆಚಾರ್ಯ ಪದವಿ ನೀಡುವ ಕಾರ್ಯಕ್ರಮ ನಮ್ಮ ಗ್ರಾಮಗಳಲ್ಲಿ ನೆರವೇರಲಿ ಎಂಬ ಭಾವನೆಯಿಂದ ಮುನಿಗಳಿಗೆ ವಿನಂತಿಸಿದರು.

ಸಿದ್ಧಾಂತಸಾಗರ್ ಮುನಿ ಮಹಾರಾಜರು ಹೇಳುವಾಗ ಆಚಾರ್ಯ ಪದವಿ ವಿದ್ಯಾಸಾಗರ ಮುನಿ ಮಹಾರಾಜರಿಗೆ ನೀಡುವ ಈ ಪವಿತ್ರ ಕಾರ್ಯಕ್ರಮ ಗೌರವ ಫೆಬ್ರವರಿ 19 ಹಾಗೂ 20ರಂದು ಜರುಗಲಿದೆ ಕಾರ್ಯಕ್ರಮದ ಸ್ಥಳ ಎರಡೇ ದಿನಗಳಲ್ಲಿ ನಿಶ್ಚಿತಗೊಳಿಸಿ ಈ ಅಧುರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಇದರಲ್ಲಿ ಸಂಪೂರ್ಣ ಭಾರತ ದೇಶದಿಂದ ಅನೇಕ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಉದ್ದಿಮೆಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿ ಕಾರ್ಯಕ್ರಮ ಯಶಸ್ವಿಗೊಳಿಸಲು ಆಶೀರ್ವದಿಸಿದರು.

ಶಿರುಗುಪ್ಪಿಯ ಜೈನ್ ಸಮಾಜ ಸಂಘಟನೆಯ ಕಾರ್ಯದರ್ಶಿಗಳು ಹಾಗೂ ಹಿರಿಯ ನ್ಯಾಯವಾದಿ ಅಭಯ್ ಕುಮಾರ್ ಅಕಿವಾಟೆ ಮಾತನಾಡಿ ವಿದ್ಯಾಸಾಗರಜಿ ಮುನಿ ಮಹಾರಾಜ್ ಗೆ ನೀಡುವ ಆಚಾರಿ ಪದವಿ ಸಿರುಗುಪ್ಪಿ ಗ್ರಾಮದಲ್ಲಿ ನೆರವೇರಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸುತ್ತೇವೆ ಎಂದು ಸಮಾಜದ ವತಿಯಿಂದ ಭರವಸೆ ನೀಡಿದರು. ಅಲ್ಲದೆ ಬೇರೆ ಪಟ್ಟಣಗಳಲ್ಲಿ ಈ ಕಾರ್ಯಕ್ರಮ ನಿರ್ವಹಿಸಿದರೆ ಸಂಪೂರ್ಣ ಗ್ರಾಮದ ವತಿಯಿಂದ ಸಹಕಾರ ನೀಡುವ ಭಾವನೆ ವ್ಯಕ್ತಪಡಿಸಿದರು.

ಶಿರುಗುಪ್ಪಿಯ ಕಾರ್ಯಕ್ರಮದಲ್ಲಿ ಸಾಂಗ್ಲಿ ಪಟ್ಟಣದ ಸಮಾಜದ ಮುಖಂಡ ರಾಜು ಪಾಟೀಲ್, ಬೆಲವಡಿ ಗ್ರಾಮದ ಮಗದುಮ್ ಸರ್, ಕೊಲ್ಲಾಪುರ ನಗರದ ರವಿ ಪಾಟೀಲ್, ಶಿರಗುಪ್ಪಿ ಜೈನ್ ಸಮಾಜದ ಅಧ್ಯಕ್ಷ ಮಹಾವೀರ ಕಾತ್ರಳೆ, ವಿಜಯ್ ಅಕಿವಾಟೆ, ಬೊಮ್ಮನಾ ಚೌಗುಲೆ, ಭೀಮು ಭೋಲೆ, ಬಾಬು ಕಾರದಗೆ, ಶ್ರೀಮತಿ ಸುನಂದಾ ಕಾತ್ರಾಳ, ಸೇರಿದಂತೆ ಜೈನ ಸಮಾಜದ ಶ್ರಾವಕ ಸ್ರಾವಿಕೆಯರು ಪಾಲ್ಗೊಂಡಿದ್ದರು.

Tags:

error: Content is protected !!