BELAGAVI

ವಾರ್ಡ್ ಸಂಖ್ಯೆ 29ರಲ್ಲಿ ಮದ್ಯವ್ಯಸನಿಗಳಿಂದ ತೊಂದರೆ…

Share

ಬೆಳಗಾವಿ ನಗರದ ವಾರ್ಡ್ ಸಂಖ್ಯೆ 29ರ ವ್ಯಾಪ್ತಿಯಲ್ಲಿ ಮದ್ಯ ವ್ಯಸನಿಗಳಿಂದ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ಕುರಿತು ನಾಗರಿಕರು ಪೊಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ.
ಬೆಳಗಾವಿ ನಗರದ ವಾರ್ಡ್ ಸಂಖ್ಯೆ 29ರ ವ್ಯಾಪ್ತಿಯಲ್ಲಿ ಮದ್ಯ ವ್ಯಸನಿಗಳಿಂದ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಶಾಸಕ ಅಭಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಹಾಗೂ ನಗರಸೇವಕ ನಿತಿನ್ ಜಾಧವ್ ನೇತೃತ್ವದಲ್ಲಿ ಗುರುವಾರ ಟಿಳಕವಾಡಿ ಪೊಲೀಸ್ ಠಾಣೆಯ ಸಿಪಿಐ ರವಿ ಪೂಜಾರಿ ಅವರನ್ನು ಭೇಟಿ ಮಾಡಿದ ನಿಯೋಗವು ಸವಿಸ್ತಾರವಾಗಿ ಚರ್ಚಿಸಿತು.ವಾರ್ಡ್‌ನ ವಿವಿಧೆಡೆ ನಡೆಯುತ್ತಿರುವ ಅಸಾಮಾಜಿಕ ಚಟುವಟಿಕೆಗಳಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನಾಗರಿಕರು ಸಿಪಿಐ ಅವರ ಗಮನಕ್ಕೆ ತಂದರು.
ಸಾರ್ವಜನಿಕರ ಅಹವಾಲುಗಳನ್ನು ಶಾಂತವಾಗಿ ಆಲಿಸಿದ ಸಿಪಿಐ ರವಿ ಪೂಜಾರಿ ಅವರು, ಮುಂದಿನ 15 ದಿನಗಳಲ್ಲಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಅಲ್ಲದೆ, ನಾಗರಿಕರು ಗುರುತಿಸಿದ ಸಮಸ್ಯಾತ್ಮಕ ಸ್ಥಳಗಳಲ್ಲಿ ಪ್ರತಿದಿನ ಪೋಲಿಸ್ ಗಸ್ತು ಹೆಚ್ಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಸೇವಕ ನಿತೀನ್ ಜಾಧವ್, “ವಾರ್ಡಿನ ಜನರ ಸಮಸ್ಯೆಗಳ ಕುರಿತು ಪೋಲಿಸ್ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳ ವಿರುದ್ಧ ವಾರ್ಡ್‌ನ ನಾಗರಿಕರು ಮತ್ತು ಮಹಿಳೆಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಒಗ್ಗೂಡಿ ಮನವಿ ನೀಡುತ್ತಿರುವುದು ಬೆಳಗಾವಿಯಲ್ಲಿ ಇದೇ ಮೊದಲು,” ಎಂದು ಹೇಳಿದರು. ಜನಹಿತಕ್ಕಾಗಿ ಧ್ವನಿ ಎತ್ತಿದ ನಾಗರಿಕರಿಗೆ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

Tags:

error: Content is protected !!