ಕಳೆದ ಡಿಸೆಂಬರ್ 22 ರಂದು ಧಾರವಾಡದ ಮದಿಹಾಳದ ಸಿದ್ರಾಮ ಕಾಲನಿಯಲ್ಲಿನ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಬಂಧಿಸುವಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ ಬರೋಬ್ಬರಿ 3ಲಕ್ಷಕ್ಕೂ ಅಧಿಕ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.


ವೈ- ಕಾನೂನು ಸಂಘರ್ಷಕ್ಕೆ ಒಳಗಾದ ಧಾರವಾಡ ಗೊಲ್ಲರ ಕಾಲನಿ ಮೂಲದ ಶಾಹಿಲ್ ಗೋಕಾಕ್ (16) ಬಧಿತ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಧಾರವಾಡ ಶಜರ ಠಾಣೆಯ ಇನ್ಸ್ಪೆಕ್ಟರ್ ಅಲಿ ಶೆಖ್ ಹಾಗೂ ಪಿಎಸ್ಐ ವಿನೋಧ ನೇತೃತ್ವದ ತಂಡ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡ ನಂತರ ಆರೋಪಿ ಕಳ್ಳತನ ಕುರಿತು ಬಾಯಿಬಿಟ್ಟಿದ್ದಾನೆ. ಇನ್ನೂ ಬಂಧಿತ ಆರೋಪಿಯಿಂದ ಒಟ್ಟು 22 ಗ್ರಾಂ ತೂಕದ ಚಿನ್ನ, 88 ಗ್ರಾಂ ಬೆಳ್ಳಿ ಸಾಮಾನುಗಳು ಸೇರಿ ಒಟ್ಟು ಸುಮಾರು 3 ಲಕ್ಷ12 ಸಾವಿರ558/- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಠಾಣೆಯ ಇನ್ಸ್ಪೆಕ್ಟರ್ ಆ್ಯಂಡ್ ಟೀಂನ ಕಾರ್ಯಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ, ಡಿಸಿಪಿ ನಂದಗಾವಿ ಹಾಗೂ ರವೀಶ್ ಸೇರಿ ಧಾರವಾಡ ಎಸಿಪಿ ಪ್ರಶಾಂತ್ ಸಿದ್ಧನಗೌಡರವರು ಸಿಬ್ಬಂದಿಗಳ ಕಾರ್ಯ ಶ್ಲಾಘಿಸಿದರು.
